ಮಡಿಕೇರಿ, ಸೆ. 24: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಿದ್ದಿರುವ ಮಳೆಯಿಂದ ರಸ್ತೆಗಳು ಪೂರ್ಣ ಹದಗೆಟ್ಟು ಜನ ಸಾಮಾನ್ಯರು ಓಡಾಡದಂತಹ ಸನ್ನಿವೇಶ ಸೃಷ್ಠಿಯಾಗಿದೆ. ಆದ್ದರಿಂದ 20 ಕೋಟಿ ರೂ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮನವಿ ಮಾಡಿದ್ದಾರೆ.
ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಬುಧವಾರ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೊಸಮನೆ ಕವಿತಾ ಪ್ರಭಾಕರ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್. ಮಂಜುಳಾ, ಜಿ.ಪಂ. ಸದಸ್ಯರಾದ ಕಿರಣ್ ಕಾರ್ಯಪ್ಪ, ಸಿ.ಕೆ.ಬೋಪಣ್ಣ, ಎಂ.ಕೆ. ವಿಜು ಸುಬ್ರಮಣಿ, ಮೂಕೊಂಡ ಪಿ. ಸುಬ್ರಮಣಿ ಇತರರ ಉಪಸ್ಥಿತಿಯಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರು.