ಸುಂಟಿಕೊಪ್ಪ, ಸೆ. 24: ಪನ್ಯ ತೋಟದಲ್ಲಿ ರೈಟರ್ ನಟರಾಜು ಪುತ್ರ ದರ್ಶನ್ (26) ಬುಧುವಾರ ಹಾರಂಗಿ ಸಮೀಪದ ಹುದುಗೂರುವಿನ ಪತ್ನಿ ಮನೆಯಲ್ಲಿ ವಿಷ ಸೇವಿಸಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತನು ಹುದುಗೂರಿನ ವಿದ್ಯಾ ಎಂಬಾಕೆಯನ್ನು ವಿವಾಹವಾಗಿದ್ದನು.