ಕೂಡಿಗೆ, ಸೆ. 23: ನಿರುದ್ಯೋಗಿ ಯುವಕ-ಯುವತಿಯರು ಹೈನುಗಾರಿಕೆ, ಕೋಳಿ ಹಂದಿ ಸಾಕಣೆಯಲ್ಲಿ ತೊಡಗಿರುವವರು ಸಾಕಣೆಯ ಸ್ಥಳದಲ್ಲಿ ಶುಚಿತ್ವವನ್ನು ಕಾಪಾಡಿಕೊಂಡು ಹೆಚ್ಚು ಅಭಿವೃದ್ಧಿ ಹೊಂದುವಂತೆ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರದ ಸಲಹೆ ನೀಡಿದರು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ನಿರುದ್ಯೋಗ ಯುವಕರು-ಯುವತಿಯರು ಕೂಡಿಗೆಯಲ್ಲಿರುವ ಸ್ವ-ಉದ್ಯೋಗ ಕೇಂದ್ರದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ತರಬೇತಿ ನಂತರ ಹಸು, ಕೋಳಿ, ಹಂದಿ ಮೇಕೆ ಸಾಕಣೆÉಯಲ್ಲಿ ತೊಡಗಿದ್ದಾರೆ. ಆಯಾ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಅಡಳಿತ ಅಧಿಕಾರಿ ಭೇಟಿ ನೀಡಿ ಅನೇಕ ಸೂಚನೆಗಳನ್ನು ನೀಡಿದರು.

ಗ್ರಾಮ ಪಂಚಾಯಿತಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಹೈನುಗಾರಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಬೇಸಾಯದ ತರಬೇತಿ ಪಡೆಯಲು ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು.