ಕುಶಾಲನಗರ, ಸೆ. 21: ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ಪ್ರಯುಕ್ತ ಸ್ಕೌಟ್‍ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರೋಟರಿ ಸದಸ್ಯ ಅಶೋಕ ಅವರು ಪ್ರಥಮ ಚಿಕಿತ್ಸೆ ವಿಧಿವಿಧಾನಗಳ ಬಗ್ಗೆ ಮಾಹಿತಿ ಒದಗಿಸಿದರು.

ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೃದಯ ಸ್ತಂಭನ, ಗಂಟಲೊಳಗೆ ಏನಾದರೂ ಸಿಕ್ಕಿಕೊಂಡಾಗ, ನೀರಲ್ಲಿ ಮುಳುಗಿದಾಗ, ಅಪಘಾತವಾದಾಗ, ಮೂಳೆ ಮುರಿತ, ತಲೆಗೆ ಏಟು ಬಿದ್ದ ಸಂದರ್ಭ ತಕ್ಷಣ ಮಾಡುವ ಪ್ರಥಮ ಚಿಕಿತ್ಸಾ ವಿಧಾನಗಳ ತರಬೇತಿಯನ್ನು ನೀಡಿದರು. ಇದೇ ಸಂದರ್ಭ ರೋಟರಿ ಹಿರಿಯ ಸದಸ್ಯ ಡಾ. ಹರಿ ಶೆಟ್ಟಿ ಆತ್ಮಹತ್ಯೆ, ವಿಷ ಕುಡಿದ ಸಂದರ್ಭದಲ್ಲಿ, ಕುದಿಯುವ ಎಣ್ಣೆ ಹಾಗೂ ಕೆಲವು ವಿಶೇಷ ಸಂದರ್ಭದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸಾ ವಿಧಿ ವಿಧಾನಗಳನ್ನು ತಿಳಿಸಿದರು. ರೋಟರಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಉಲ್ಲಾಸ್ ಕೃಷ್ಣ, ಮಹೇಶ್ ನಲವಾಡೆ, ಆರತಿ ಶೆಟ್ಟಿ ಮತ್ತಿತರರು ಇದ್ದರು.