ಕೂಡಿಗೆ, ಸೆ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಪಶುಪಾಲನೆ ಇಲಾಖೆಯ ಪಶು ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಹುದುಗೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ವ್ಯಾಪ್ತಿಯ ಎಂಟು ಗ್ರಾಮಗಳಿಗೆ ಅನುಕೂಲವಾಗುವಂತೆ ಕಳೆದ ಹತ್ತು ವರ್ಷಗಳಿಂದ ಹಸುಗಳ ಸಾಗಾಣಿಕೆಯು ಹೆಚ್ಚಾಗಿದೆ. ಅದಕ್ಕೆ ಸಂಬಂಧಿಸಿದಂತೆ ಹುದುಗೂರು ಗ್ರಾಮದಲ್ಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘವನ್ನು ತೆರೆಯಲಾಗಿದೆ ಅದರಂತೆ ಸಂಘಗಳಿಗೆ ಹೆಚ್ಚು ಸಾಲ ಸೌಲಭ್ಯಗಳನ್ನು ಪಡೆದ ಹೈಬ್ರಿಡ್ ಹಸುಗಳನ್ನು ಖರೀದಿಸಿ ಹೆಚ್ಚು ಹಾಲನ್ನು ಕರೆದು ಸಂಘಕ್ಕೆ ಹಾಕುವ ಕಾರ್ಯ ನಡೆಯುತ್ತಿದೆ.
ಈ ವ್ಯಾಪ್ತಿಯಲ್ಲಿ ಪಶುವೈದ್ಯ ಚಿಕಿತ್ಸಾ ಶಾಲೆ ಇರುವುದರಿಂದ ಅನೇಕ ಹಸುಗಳಿಗೆ ಬರುವ ರೋಗ ರೂಜನೆಗಳನ್ನು ತಡೆಯಲು ಅನುಕೂಲವಾಗುತ್ತಿದೆ.
ಈ ಕೇಂದ್ರದಲ್ಲಿ ಇರುವ ಹಳೆಯ ಕಟ್ಟಡವನ್ನು ಕೆಡವಿ ನಂತರ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲು ಈ ಭಾಗದ ಎಂಟು ಗ್ರಾಮಗಳ ಗ್ರಾಮಸ್ಥರ ಒತ್ತಾಯವಾಗಿದೆ. ಇಲ್ಲಿನ ರೈತ ಸಮಿತಿಯ ಸಭೆಯನ್ನು ಗ್ರಾಮದಲ್ಲಿ ಕರೆದು ಅವರ ತೀರ್ಮಾನದಂತೆ ಈ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ ಮತ್ತು ಪಶು ಪರಿವೀಕ್ಷಕರ ಡಿ ದರ್ಜೆಯ ನೌಕರರ ನೇಮಕ ಮಾಡುವಂತೆ ಸಂಬಂಧಿಸಿದ ಇಲಾಖೆಯವರಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಪತ್ರವನ್ನು ನೀಡಿರುತ್ತಾರೆ.
ಬೀಳುವ ಹಂತದಲ್ಲಿರುವ ಪಶು ವೈದ್ಯ ಚಿಕಿತ್ಸಾ ಕೇಂದ್ರವನ್ನು ಅತಿ ಶೀಘ್ರದಲ್ಲಿ ಮೇಲ್ದರ್ಜೆಗೆ ಏರಿಸಲು ಒತ್ತಾಯ ಮಾಡಿರುತ್ತಾರೆ.