ಮಡಿಕೇರಿ, ಸೆ. 21: ಕಾರ್ಮಿಕರ ಉದ್ಯೋಗಕ್ಕೆ ಸಂಚಕಾರ ತರಲಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಯನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. 24 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕೊಡಗು ಜಿಲ್ಲಾ ಹಮಾಲಿ ಕಾರ್ಮಿಕರ ಸಂಘ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಅಧಿವೇಶನದ ಹಂತದಲ್ಲಿ ಹಮಾಲಿ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಗಮನ ಸೆಳೆÉಯುವ ಸಲುವಾಗಿ ಹೋರಾಟ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಹಮಾಲಿ ಕಾರ್ಮಿಕರು ಅತ್ಯಂತ ಶ್ರಮದಾಯಕವಾದ ಕೆಲಸದಲ್ಲಿ ನಿರತ ವರ್ಗವಾಗಿದ್ದು, ಅವರ ಬೆಳವಣಿಗೆಗೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡದೆ ಕಡೆಗಣಿಸುತ್ತಿದೆ. ಕೊರೊನಾ ಲಾಕ್‍ಡೌನ್ ಸಂದರ್ಭ ಅಗತ್ಯ ದುಡಿಮೆ ಇಲ್ಲದೆ ಸಂಕಷ್ಟಕ್ಕೀಡಾದ ಹಮಾಲಿ ಕಾರ್ಮಿಕರಿಗೆ ಸರ್ಕಾರ ಯಾವುದೇ ಆರ್ಥಿಕ ಪರಿಹಾರ ಮತ್ತು ಮೌಲಭೂತ ಸೌಲಭ್ಯಗಳನ್ನು ನೀಡದೆ ಅತಂತ್ರರನ್ನಾಗಿಸಿದೆ ಎಂದು ದೂರಿದರು. ಈ ಹಿನ್ನೆಲೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯಾದ್ಯಂತ ತಾ. 23 ಮತ್ತು 24 ರಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯಲ್ಲಿ ತಾ. 24 ರಂದು ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕ ಮುಷ್ಕರ ದೊಂದಿಗೆ ಮನವಿ ಪತ್ರ ನೀಡಲಾಗು ವುದೆಂದರು. ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಹಸನಬ್ಬ, ಮಡಿಕೇರಿ ತಾಲೂಕು ಖಜಾಂಚಿ ಕೆ.ಸಿ. ಜಗನ್ನಾಥ್ ಉಪಸ್ಥಿತರಿದ್ದರು.