ಸಿದ್ದಾಪುರ, ಸೆ. 21: ನೆಲ್ಲಿಹುದಿಕೇರಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗ್ರಾಮ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಪೌರ ಕಾರ್ಮಿಕರಾದ ವೆಂಕಟೇಶ್ ಮತ್ತು ಪಳನಿಯವರ ಸೇವೆಯನ್ನು ಗುರುತಿಸಿ ಫಲ ಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಟಿ.ಸಿ. ಅಶೋಕ್, ತಾಲೂಕು ಸಮಿತಿ ಸದಸ್ಯ ವಸಂತಕುಮಾರ್ ಹೊಸಮನೆ, ಸಚಿನ್, ಮಹೇಂದ್ರ, ಚಂದ್ರಶೇಖರ್, ಯೋಗೇಶ್ ಹಾಗೂ ಹಿಂದೂ ಸಂಘಟನೆಯ ಪ್ರಮುಖರಾದ ಪ್ರಕಾಶ್, ಪದ್ಮನಾಭ್, ಅನೀಶ್, ಜಯ ಇನ್ನಿತರರು ಹಾಜರಿದ್ದರು.
ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಪ್ರಮೋದ್ ಸ್ವಾಗತಿಸಿ, ಶರಣ್ ವಂದಿಸಿದರು.