ಪೆರಾಜೆ, ಸೆ. 21: ದೇಶದಲ್ಲಿ ಪ್ರತಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಧಾನಿ ಯವರ ಮಹತ್ವದ ಉದ್ದೇಶವಾದ ಸೌಭಾಗ್ಯ ಯೋಜನೆಯು ಪೆರಾಜೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಬಿರುಸಿನಿಂದ ನಡೆಯುತ್ತಿದೆ.
ಪೆರಾಜೆಯ ಗಡಿಗುಡ್ಡೆಯ ಸಮೀಪದ ರಾಮಣ್ಣ ನಾಯ್ಕ ಅವರು ಈ ಯೋಜನೆಯ ಫಲಾನುಭವಿಗಳಾಗಿದ್ದು ಅವರ ಮನೆಗೆ ರಸ್ತೆ ಸಂಪರ್ಕವಿಲ್ಲದೆ ವಿದ್ಯುತ್ ಕಂಬ ಸಾಗಿಸುವುದು ಕಷ್ಟ ಸಾಧ್ಯವಾಗಿತ್ತು. ಇದನ್ನು ಮನಗಂಡು ಪೆರಾಜೆಯ ಚಿಗುರು ಯುವಕ ಮಂಡಲದ ಸದಸ್ಯರು ಎಲ್ಲಾ ಸಿಮೆಂಟ್ ಕಂಬಗಳನ್ನು ಫಲಾನುಭವಿಗಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರ್ದಿಷ್ಟ ಸ್ಥಳಗಳಿಗೆ ಮಾನವ ಶ್ರಮದ ಮೂಲಕ ತಲುಪಿಸುವ ವ್ಯವಸ್ಥೆ ಮಾಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಕೊಡಗು ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸದಸ್ಯರಿಗೆ ನೈತಿಕ ಬೆಂಬಲ ನೀಡಿ ಪೆÇ್ರೀತ್ಸಾಹಿಸಿದರು. ಶ್ರಮದಾನದಲ್ಲಿ ಚಿಗುರು ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ ಉಪಾಧ್ಯಕ್ಷ ಪ್ರವೀಣ್ ಮಜಿಕೋಡಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ , ಸಂಘದ ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಪ್ಪ ಅಡ್ಕ, ಉದಯಚಂದ್ರ ಕುಂಬಳಚೇರಿ, ಯುವ ಕೋಟೆ ಯುವಕ ಮಂಡಲ ಗೌರವಾಧ್ಯಕ್ಷ ಶುಭಾಶ್ ಬಂಗಾರಕೋಡಿ, ಸೀತಾರಾಮ ಕದಿಕಡ್ಕ, ಮಹೇಶ್ ಮೂಲೆಮಜಲು, ರಾಖೇಶ್ ಕುಂದಲ್ಪಾಡಿ, ಸೌಭಾಗ್ಯ ಯೋಜನೆಯ ಸಿಬ್ಬಂದಿಗಳು ಹಾಗೂ ಚಿಗುರು ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸಿದರು.