ಸಂಪಾಜೆ, ಸೆ. 21: ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ ಕನ್ಯಾ ಸಂಕ್ರಾಂತಿ ಪೂಜೆ ನಡೆಯಿತು. ಗ್ರಾಮಸ್ಥರು ಭಕ್ತಾದಿಗಳು ಆಗಮಿಸಿ ದೇವರ ಅರಶಿನ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹೆಚ್.ಸಿ. ಗೀತಾ ದ್ವಿತೀಯ ಪಿಯುಸಿ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ 600 ರಲ್ಲಿ 558 (ಶೇ. 93) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು, ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದ ಸಲುವಾಗಿ ದೇವಾಲಯ ಆಡಳಿತ ಮಂಡಳಿ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಸಂಪಾಜೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಕುಮಾರ್ ಚೆದ್ಕಾರ್, ಮಾಜಿ ಯೋಧ, ಹಿರಿಯರಾದ ಮಾಯಿಲಪ್ಪ ಮೂಲ್ಯ, ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯೆ ರಮಾದೇವಿ ಬಾಲಚಂದ್ರ ಕಳಗಿ, ದೇವಸ್ಥಾನದ ಆಡಳಿತ ಅಧ್ಯಕ್ಷ ಕೊರಗಪ್ಪ ಅರಮನೆತೋಟ, ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ, ಕಾರ್ಯದರ್ಶಿ ಕೃಷ್ಣ ಅರಮನೆತೋಟ, ಸಹ ಕಾರ್ಯದರ್ಶಿ ಶೇಖರ ಅರಮನೆತೋಟ, ಸಂಪಾಜೆ ಭಾಗದ ಆಶಾ ಕಾರ್ಯಕರ್ತೆ ಸಾವಿತ್ರಿ ಕೊರಗಪ್ಪ, ಪೂವಯ್ಯ ಬೈತಡ್ಕ, ಕೋಡಿ ಲಕ್ಷ್ಮಣ, ಸಂಪಾಜೆ ಪಯಸ್ವಿನಿ ಯುವಕ ಮಂಡಲದ ಸದಸ್ಯರುಗಳು, ವಿದ್ಯಾರ್ಥಿನಿಯ ಪೆÇೀಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.