ಕುಶಾಲನಗರ, ಸೆ. 21: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಕುಶಾಲನಗರ ಹೋಬಳಿಯ 3 ಅತ್ಯುತ್ತಮ ಶಿಕ್ಷಕರುಗಳಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಮ್ಮನಕೊಲ್ಲಿ ಸರಕಾರಿ ಶಾಲೆಯ ಮುಖ್ಯೊಪಾಧ್ಯಾಯ ಹೆಚ್.ಎಂ. ಲೋಕೇಶ್, ಫಾತಿಮ ಕಾನ್ವೆಂಟ್‍ನ ಶಿಕ್ಷಕಿ ರೋಸಿ, ಗೊಂದಿಬಸವನಹಳ್ಳಿಯ ಎಸ್.ಕೆ. ಜಲಜಾಕ್ಷಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಉಲ್ಲಾಸ್ ಕೃಷ್ಣ, ಪ್ರಮುಖರಾದ ಎಂ.ಡಿ. ರಂಗಸ್ವಾಮಿ, ಕ್ರಿಜ್ವೆಲ್ ಕೋಟ್ಸ್, ಎಂ.ಡಿ. ಅಶೋಕ್, ಡಾ. ಹರಿಶೆಟ್ಟಿ, ಎಸ್.ಕೆ. ರಾಜಶೇಖರ್, ಆರತಿ ಶೆಟ್ಟಿ ಮತ್ತಿತರರು ಇದ್ದರು.