ಮಡಿಕೇರಿ, ಸೆ. 20: ಜಿಲ್ಲೆಯಲ್ಲಿ 34 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 2271 ಪ್ರಕರಣಗಳು ಪತ್ತೆಯಾಗಿದ್ದು, 1872 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 30 ಮಂದಿ ಸಾವನ್ನಪ್ಪಿದ್ದು, 369 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 123 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 45 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ 201 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 334 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಭಾಗಮಂಡಲ ಬಿಸಿಎಂ ಹಾಸ್ಟೆಲ್‍ನ 31 ವರ್ಷದ ಪುರುಷ, ಭಾಗಮಂಡಲ ಭೂತನಕಾಡುವಿನ 29 ವರ್ಷದ ಮಹಿಳೆ, 66, 25 ವರ್ಷದ ಪುರುಷರು ಮತ್ತು 55 ವರ್ಷದ ಮಹಿಳೆ, ಮಡಿಕೇರಿ ಕ್ಲಬ್ ಮಹೀಂದ್ರದ 22 ಮತ್ತು 21 ವರ್ಷದ ಪುರುಷರು, ಬೊಯಿಕೇರಿಯ ಸ್ಯಾಂಡಲ್ ಕಾಡು ಎಸ್ಟೇಟಿನ 55 ಮತ್ತು 45 ವರ್ಷದ ಪುರುಷರು, ಕುಶಾಲನಗರ ಹಾರಂಗಿ ರಸ್ತೆಯ ವೆಂಕಟೇಶ್ವರ ಬಡಾವಣೆ 4ನೇ ಬ್ಲಾಕಿನ 41 ವರ್ಷದ ಪುರುಷ, ಹಾಕತ್ತೂರುವಿನ ಬಿಳಿಗಿರಿ ಮಸೀದಿ ಎದುರಿನ 24 ವರ್ಷದ ಪುರುಷ, ಕುಶಾಲನಗರ ಗುಂಡೂರಾವ್ ಲೇಔಟಿನ 38 ವರ್ಷದ ಮಹಿಳೆ ಮತ್ತು 48 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ 3 ವರ್ಷದ ಬಾಲಕ, ಮಡಿಕೇರಿ ಪೆನ್‍ಷನ್ ಲೈನಿನ ಅಖಿಲ ರವಿ ಆಸ್ಪತ್ರೆ ಸಮೀಪದ 50 ವರ್ಷದ ಮಹಿಳೆ, ಕುಶಾಲನಗರ ಕೂಡ್ಲೂರು ಕೈಗಾರಿಕಾ ಪ್ರದೇಶದ 30 ವರ್ಷದ ಮಹಿಳೆ, ಸೋಮವಾರಪೇಟೆ ತಣ್ಣೀರುಹಳ್ಳ ಜಿಎಂಪಿ ಶಾಲೆ ಸಮೀಪದ 42 ವರ್ಷದ ಪುರುಷ, ಪಿರಿಯಾಪಟ್ಟಣ ಕೊಪ್ಪದ ಎಸ್.ಎಲ್.ಎನ್ ಲೇಔಟಿನ ಭಾರತ್ ಮಾತಾ ಶಾಲೆ ಸಮೀಪದ 62 ವರ್ಷದ ಪುರುಷ, ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ಸಮೀಪದ ಟಿ.ಜಾನ್ ಲೇಔಟಿನ 23 ವರ್ಷದ ಮಹಿಳೆ ಮತ್ತು 3 ವರ್ಷದ ಬಾಲಕಿ, ಕುಶಾಲನಗರ ರಥಬೀದಿಯ ಸರ್ಕಾರಿ ಆಸ್ಪತ್ರೆ ಸಮೀಪದ 40 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ 1ನೇ ಬ್ಲಾಕ್ ನ 29 ವರ್ಷದ ಪುರುಷ, ಕೂಡಿಗೆಯ ಸೇತುವೆ ಸಮೀಪದ 56 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿಯ 40 ವರ್ಷದ ಪುರುಷ, ಕೊಡ್ಲಿಪೇಟೆ ಬೆಸೂರು ಗ್ರಾಮದ ಪಂಚಾಯತ್ ಸಮೀಪದ 59 ವರ್ಷದ ಪುರುಷ, ಬಿಟ್ಟಂಗಾಲ ಅಂಚೆಯ ನಾಂಗಾಲ ಗ್ರಾಮದ 43 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ, ವೀರಾಜಪೇಟೆ ಮಾಲ್ದಾರೆಯ ಕಡಂಗಡಿ ಗ್ರಾಮದ 51 ವರ್ಷದ ಪುರುಷ, ವೀರಾಜಪೇಟೆಯ ಕಡಂಗಮರೂರು ಗ್ರಾಮ ಮತ್ತು ಅಂಚೆಯ 25 ವರ್ಷದ ಪುರುಷ ಮತ್ತು 52 ವರ್ಷದ ಮಹಿಳೆ, ವೀರಾಜಪೇಟೆ ಜೈನ್ ಬೀದಿಯ ಕರ್ನಾಟಕ ಬ್ಯಾಂಕ್ ಎದುರಿನ 52 ವರ್ಷದ ಪುರುಷ, ಕುಶಾಲನಗರ ಹಾರಂಗಿ ಅಂಚೆಯ ಅತ್ತೂರು ಗ್ರಾಮದ 46 ವರ್ಷದ ಪುರುಷ, ಅರಕಲಗೂಡುವಿನ 50 ವರ್ಷದ ಮಹಿಳೆ, ಸೋಮವಾರಪೇಟೆ ಶಿರಂಗಾಲ ಕಾಡಬಸವೇಶ್ವರ ದೇವಾಲಯ ಸಮೀಪದ 45 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.