ಪಾಲಿಬೆಟ್ಟ, ಸೆ. 20: ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ ತಾ.21 ರಂದು (ಇಂದು) ಬೆಳಿಗ್ಗೆ ಪಾಲಿಬೆಟ್ಟದ ಅನುಗ್ರಹ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಬೆಳೆಗಾರರ ಒಕ್ಕೂಟದ ಪ್ರಮುಖ ಡಾ. ಎ.ಸಿ ಗಣಪತಿ ತಿಳಿಸಿದ್ದಾರೆ.