*ಕೊಡ್ಲಿಪೇಟೆ, ಸೆ.20: ಕೊಡ್ಲಿಪೇಟೆಯ ಸುನ್ನಿ ಸ್ಟುಡೆಂಟ್ ಫೆಡರೇಷನ್‍ನ ಧ್ವಜ ದಿನದ ಅಂಗವಾಗಿ ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ವತಿಯಿಂದ ಹ್ಯಾಂಡ್‍ಪೆÇೀಸ್ಟ್ ನೂರ್ ಮಹಲ್‍ನಲ್ಲಿ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯ- ಮನುಷ್ಯನಿಗೆ ರಕ್ತವನ್ನು ನೀಡುವುದು ಅನಿವಾರ್ಯ ಎಂದರು.

ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಡಾ.ಉದಯ್ ಕುಮಾರ್, ಲೇಡಿಗೋಷನ್ ಆಸ್ಪತ್ರೆಯ ಡಾ.ಜೆ.ಜೆ.ಭಟ್ ರಕ್ತದಾನದ ಮಹತ್ವವನ್ನು ವಿವರಿಸಿದರು. ಶಿಬಿರವನ್ನು ಎಸ್.ವೈ.ಎಸ್. ರಾಜ್ಯ ಸಮಿತಿ ಸದಸ್ಯ ಹಸೈನಾರ್ ಉದ್ಘಾಟಿಸಿದರು. ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಜೀಜ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಎಸ್.ಎಸ್.ಎಫ್. ಜಿಲ್ಲಾ ಬ್ಲಡ್ ಸೈಬೋ ಅಧ್ಯಕ್ಷ ಶಾಫಿ ಸಅದಿ ಪ್ರಾಸ್ತಾವಿಕ ಭಾಷÀಣ ಮಾಡಿದರು. ಎಸ್.ವೈ.ಎಸ್. ರಾಜ್ಯ ನಾಯಕ ಹಫೀಳ್ ಸಆದಿ, ಕನ್ನಡ ಸಾಹಿತ್ಯ ಪರಿಷÀತ್ ಹೋಬಳಿ ಅಧ್ಯಕ್ಷ ಎಂ.ಎಸ್. ಅಬ್ದುಲ್ ರಬ್ಬ್, ಮಸ್ಜಿದುನ್ನೂರ್ ಖತೀಬ್ ಹಾರಿಸ್ ಬಾಖವಿ, ರಕ್ತ ನಿಧಿ ಕೇಂದ್ರದ ಡಾ.ಕರುಂಬಯ್ಯ, ಮಸ್ಜಿದುನ್ನೂರ್ ಕಾರ್ಯದರ್ಶಿ ಮಹಮ್ಮದ್ ಹನೀಫ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ನೂರ್ ಯೂತ್ ಅಸೋಸಿಯೇಷÀನ್ ಅಧ್ಯಕ್ಷ ಬಾಸಿತ್ ಹಾಜಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭೂಪಾಲ್, ಜಯ ಕರ್ನಾಟಕ ಅಧ್ಯಕ್ಷ ಶೋಭಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 103 ಮಂದಿ ರಕ್ತದಾನ ಮಾಡಿದರು.

ಎಸ್.ಎಸ್.ಎಫ್. ಕೊಡಗು ಜಿಲ್ಲಾ ಬ್ಲಡ್ ಸೈಬೋ ಸಹಭಾಗಿತ್ವದಲ್ಲಿ ವ್ಯೆದ್ಯಕೀಯ ಕಾಲೇಜು ಮಡಿಕೇರಿ ಮತ್ತು ಮಂಗಳೂರಿನ ಲೇಡಿಗೋಷÀನ್ ಆಸ್ಪತ್ರೆಗೆ ರಕ್ತವನ್ನು ನೀಡಲಾಯಿತು.