ಮಡಿಕೇರಿ, ಸೆ. 20: ಮಡಿಕೇರಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಮೊದಲ ಸಭೆಯು ಮಡಿಕೇರಿ ಓಂಕಾರೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ಭಾಜಪ ಪಕ್ಷದ ಕಚೇರಿಯಲ್ಲಿ ನಡೆಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಉದ್ಘಾಟಿಸಿದರು.
ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಕವಿತ ಬಡುವಂಡ್ರ ಮಾತನಾಡಿ, ಎಲ್ಲರೂ ಪಕ್ಷಕ್ಕಾಗಿ ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಜಿಯ ಹುಟ್ಟು ಹಬ್ಬ ಅಂಗವಾಗಿ ಮಹಿಳಾ ಮೋರ್ಚಾದ ವತಿಯಿಂದ ಬಾಲಭವನದಲ್ಲಿ ಮಕ್ಕಳಿಗೆ ಸಿಹಿ ಮತ್ತು ಪೆನ್ನು, ಪೆನ್ಸಿನ್, ನೋಟ್ ಬುಕ್ಗಳನ್ನು ವಿತರಿಸಲಾಯಿತು.
ಜಿ.ಪಂ. ಸದಸ್ಯೆ, ಮಹಿಳಾ ಮೋರ್ಚಾದ ಪದಾಧಿಕಾರಿ ಯಾಲದಾಳು ಪದ್ಮಾವತಿ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಕಾರ್ಯದರ್ಶಿ ಬದಲೇರ ರಾಣಿ ಮುತ್ತಣ್ಣ, ಉಪಾಧ್ಯಕ್ಷೆ ಮಂಡೇಪಂಡ ತ್ಯಾಗಿ ಅಪ್ಪಯ್ಯ, ಕೋಶಾಧ್ಯಕ್ಷೆ ಕೋಡಿಮಣಿಯಂಡ ಇಂದಿರ ಇನ್ನಿತರರಿದ್ದರು. ಮಹಿಳಾ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ತುಮ್ತಜ್ಜಿರ ಕುಮುದ ರಶ್ಮಿ ಸ್ವಾಗತಿಸಿದರು. ನೆರಿಯಂಡಮ್ಮಂಡ ಉಮಾಪ್ರಭು ವಂದಿಸಿದರು. ಇದೇ ಸಂದರ್ಭ ಇತ್ತೀಚೆಗೆ ಸಾವನ್ನಪ್ಪಿದ ಪಕ್ಷದ ಹಿರಿಯ ಮುಖಂಡರುಗಳಾದ ನಾರಾಯಣಾಚಾರ್ ಹಾಗೂ ಎಂ.ಡಬ್ಲ್ಯೂ ಅಯ್ಯಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.