ಸಿದ್ದಾಪುರ, ಸೆ. 20: ಶ್ರೀ ನಾರಾಯಣ ಗುರು ಪರಿಪಾಲನಾ ಯೋಗಂ ವೀರಾಜಪೇಟೆ ನಗರ ಶಾಖೆಯ ವತಿಯಿಂದ ನಗರದ ಗೌರಿಕೆರೆ ರಸ್ತೆಯಲ್ಲಿರುವ ಕಚೇರಿಯಲ್ಲಿ ಶ್ರೀ ನಾರಾಯಣಗುರು ಜನ್ಮಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಸ್.ಎನ್.ಡಿ.ಪಿ ವೀರಾಜಪೇಟೆ ಶಾಖೆಯ ಅಧ್ಯಕ್ಷ ನಾರಾಯಣ ಅವರು ಬ್ರಹ್ಮಶ್ರೀ ನಾರಾಯಣಗುರು ಅಪಾರ ಪಾಂಡಿತ್ಯ ಪಡೆದು, ಜಾತಿ, ಮತ ಪಂಥಗಳು ಒಂದೇ ಎಂದು ಪ್ರತಿಪಾದಿಸಿದವರು, ಕುಲ ಕುಲ ಗಳ ನಡುವೆ ಸಾಮರಸ್ಯ ಬೆಳೆಯಬೇಕು, ಜ್ಞಾನದಿಂದ ಮಾತ್ರ ಸಮುದಾಯಗಳ ಉನ್ನತೀಕರಣ ಸಾದ್ಯವಾಗುತ್ತದೆ. ಗುರುಗಳ ಮಾರ್ಗದರ್ಶನ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮವು ಕೊವಿಡ್ ಹಿನೆÀ್ನಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿ ಗುರುಗಳ ಜನ್ಮ ಜಯಂತಿ ಅಂಗವಾಗಿ ಹೆಗ್ಗಳ ಗ್ರಾಮ ಕೆ.ಪಿ. ಭವಾನಿ ವಿದ್ಯಾರ್ಥಿನಿಗೆ ವಿದ್ಯಾರ್ಜನೆಗೆ ಉಪಯೋಗ ವಾಗಲೆಂದು ಶಾಖೆಯ ವತಿಯಿಂದ ಧನ ಸಹಾಯದ ಚೆಕ್ ವಿತರಣೆ ಮಾಡಿದರು. ಎಸ್.ಎನ್.ಡಿ.ಪಿ ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್ ಸ್ವಾಗತಿಸಿದರೆ, ಕಾರ್ಯದರ್ಶಿ ಪದ್ಮನಾಭ ನಿರೂಪಿಸಿ, ವಂದಿಸಿದರು. ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್, ಬಿ.ಆರ್. ಬೋಜಪ್ಪ ಮತ್ತು ಯೋಗಂನ ಸದಸ್ಯರಾದ ಇ.ಸಿ. ಜೀವನ್, ಸಿ.ಆರ್. ಬಾಬು, ವಿ.ಬಿ. ಸುರೇಶ್, ಕೆ.ಕೆ. ಅನೀಲ್, ಕೆ.ಎನ್. ಉಪೇಂದ್ರ, ಗೋವಿಂದನ್, ದಾಮೋದರ್ ಹಾಗೂ ಇನ್ನಿತರರು ಹಾಜರಿದ್ದರು.