ಮಡಿಕೇರಿ, ಸೆ. 18: ಭಾರತದಲ್ಲಿ ಜನಪ್ರಿಯತೆ ಕಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚುಟುಕು ಕ್ರಿಕೆಟ್ ಪಂದ್ಯಾವಳಿಯ 13ನೇಯ ಆವೃತ್ತಿ ತಾ. 19 ರಿಂದ (ಇಂದಿನಿಂದ) ಈ ಬಾರಿ ಅರಬ್ ನೆಲದಲ್ಲಿ ಆರಂಭಗೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಮುಂದೂಲ್ಪಟ್ಟಿದ್ದ ಈ ಕ್ರಿಕೆಟ್ ಸಮರ ಇದೀಗ ಭಾರತದ ಬದಲಾಗಿ ಅರಬ್ ರಾಷ್ಟ್ರಕ್ಕೆ ಸ್ಥಳಾಂತರಗೊಂಡಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪಂದ್ಯಾವಳಿಯೊಂದಿಗೆ ಟ್ವೆಂಟಿ-20 ಕ್ರಿಕೆಟ್‍ಗೆ ಚಾಲನೆ ಸಿಗಲಿದ್ದು, ದೀಪಾವಳಿಯ ತನಕವೂ ಮುಂದುವರಿಯಲಿದೆ. ಕರ್ನಾಟಕದ ಒಟ್ಟು ಎಂಟು ಆಟಗಾರರು ವಿವಿಧ ತಂಡಗಳಲ್ಲಿದ್ದಾರೆ. ಕೊಡಗು ಮೂಲದ ಆಟಗಾರ ರಾಬಿನ್ ಉತ್ತಪ್ಪ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟ್ಸ್‍ಮನ್ ಆಗಿದ್ದಾರೆ.