ಗೋಣಿಕೊಪ್ಪ ವರದಿ, ಸೆ. 18: ವೀರಾಜಪೇಟೆ ತಾಲೂಕು ಬಿಜೆಪಿ ಯುವಮೋರ್ಚ ವತಿಯಿಂದ ಮೋದಿ ಜನ್ಮದಿನ ಪ್ರಯುಕ್ತ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸುಮಾರು 70 ದಾನಿಗಳು ರಕ್ತ ದಾನ ಮಾಡಿದರು.
ಮಧ್ಯಾಹ್ನ 2 ಗಂಟೆವರೆಗೆ ನಡೆದ ಶಿಬಿರದಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ರಕ್ತ ನೀಡಿದರು. ಶಾಸಕ ಕೆ.ಜಿ ಬೋಪಯ್ಯ ಶಿಬಿರ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಸಿ .ಕೆ ಬೋಪಣ್ಣ ರಕ್ತದಾನ ಮಾಡಿದರು.
ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಬಿಜೆಪಿ ಯುವಮೋರ್ಚ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಭರತ್, ತಾಲೂಕು ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಬಗರ್‍ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಪ್ರಮುಖರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಚೆಪ್ಪುಡಿರ ಮಾಚಯ್ಯ, ಬೊಳಕಾರಂಡ ಗಗನ್ ಗಣಪತಿ ಮತ್ತು ರಂಜನ್ ಇದ್ದರು.