ಮಡಿಕೇರಿ, ಸೆ. 17: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30 ಕ್ಕೇರಿದೆ. ಸೋಮವಾರಪೇಟೆ ತಾಲೂಕು ಯಡವನಾಡು ಗ್ರಾಮದ ನಿವಾಸಿ, ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ 96 ವರ್ಷದ ಮಹಿಳೆಯೊಬ್ಬರು ತಾ.14 ರಂದು ಕಫ ಸಂಬಂಧಿತ ಸಮಸ್ಯೆಯ ಕಾರಣ ಚಿಕಿತ್ಸೆಗಾಗಿ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ದಾಖಲಾಗಿದ್ದರು. ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿ, ಕೋವಿಡ್ ಸೋಂಕು ದೃಢಪಟ್ಟಿದ್ದು, ತಾ.16 ರಂದು ಮೃತಪಟ್ಟರು.
ಜಿಲ್ಲೆಯಲ್ಲಿ ಹೊಸದಾಗಿ 52 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2149 ಪ್ರಕರಣಗಳು ವರದಿಯಾಗಿದ್ದು. 1779 ಮಂದಿ ಗುಣಮುಖರಾಗಿದ್ದಾರೆ. 340 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 104 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 54 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 182 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 336 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಸೋಮವಾರಪೇಟೆ ಕುಸ್ಬೂರು ಗ್ರಾಮದ ಗಾಲ್ಫ್ ಗ್ರೌಂಡ್ ಸಮೀಪದ 59 ವರ್ಷದ ಪುರುಷ, ಕುಶಾಲನಗರ ಕರಿಯಪ್ಪ ಬಡಾವಣೆ 55 ವರ್ಷದ ಮಹಿಳೆ ಮತ್ತು 35 ವರ್ಷದ ಪುರುಷ, ಕುಶಾಲನಗರ ಓಂಕಾರ್ ಬಡಾವಣೆಯ 27 ವರ್ಷದ ಪುರುಷ, ಕುಶಾಲನಗರ ಕುಡ್ಲೂರುವಿನ ಯೂನಿಕ್ ಅಕಾಡಮಿ ಶಾಲೆ ಸಮೀಪದ 51 ವರ್ಷದ ಪುರುಷ, ಕುಶಾಲನಗರ ಕುಡ್ಲೂರುವಿನ ಯೂನಿಕ್ ಅಕಾಡಮಿ ಶಾಲೆ ಸಮೀಪದ 35 ವರ್ಷದ ಪುರುಷ, ಶ್ರೀಮಂಗಲ ಚೇರಲದ 29 ವರ್ಷದ ಮಹಿಳೆ, ನಾಪೆÇೀಕ್ಲು ಚೆರಿಯಪರಂಬು ಸರ್ಕಾರಿ ಶಾಲೆ ಸಮೀಪದ 52 ವರ್ಷದ ಪುರುಷ ಮತ್ತು 20 ವರ್ಷದ ಮಹಿಳೆ, ಕುಶಾಲನಗರ ಮಾದಪಟ್ಟಣದ ಇಂಜಿನಿಯರಿಂಗ್ ಕಾಲೇಜು ಎದುರಿನ 58 ವರ್ಷದ ಪುರುಷ, ಸೋಮವಾರಪೇಟೆ ತಾಳತ್ತರೆÀ ಶೆಟ್ಟಳ್ಳಿಯ ಬೈರವೇಶ್ವರ ದೇವಾಲಯ ಸಮೀಪದ 32 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ, ವೀರಾಜಪೇಟೆ ಅರಮೇರಿ ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ, 52 ವರ್ಷದ ಮಹಿಳೆ, 34 ವರ್ಷದ ಪುರುಷ ಮತ್ತು 9 ವರ್ಷದ ಮಹಿಳೆ, ಮಡಿಕೇರಿ ಭಾಗಮಂಡಲ ಬಿಸಿಎಂ ಹಾಸ್ಟೆಲ್ ಸಮೀಪದ 28 ವರ್ಷದ ಪುರುಷ, ವೀರಾಜಪೇಟೆ ಮೀನ್ ಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 30 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ, ಸೋಮವಾರಪೇಟೆ ಗೋಣಿಮರೂರು ಅಂಚೆಯ ಗಣಗೂರು ಗ್ರಾಮದ 54 ವರ್ಷದ ಪುರುಷ, ವೀರಾಜಪೇಟೆ ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿಯ 49,19 ವರ್ಷದ ಮಹಿಳೆ, 17 ಮತ್ತು 15 ವರ್ಷದ ಬಾಲಕಿಯರು, ಮಡಿಕೇರಿ ತ್ಯಾಗರಾಜ ಕಾಲೊನಿಯ ಗಣಪತಿ ದೇವಾಲಯ ಸಮೀಪದ 69 ವರ್ಷದ ಮಹಿಳೆ, ಮಡಿಕೇರಿ ತಾಳತ್ತಮನೆಯ 78 ವರ್ಷದ ಪುರುಷ, ಮಡಿಕೇರಿ ಚೈನ್ ಗೇಟ್ ವಸತಿಗೃಹದ ಸಮೀಪದ 40 ವರ್ಷದ ಪುರುಷ, ಮಡಿಕೇರಿ ಪೆನ್ ಷನ್ ಲೈನಿನ ಟೌನ್ ಹಾಲ್ ಹಿಂಭಾಗದ 4 ವರ್ಷದ ಬಾಲಕಿ ಮತ್ತು 31 ವರ್ಷದ ಮಹಿಳೆ, ವೀರಾಜಪೇಟೆ ಹೆಗ್ಗಳ ಅಂಚೆಯ ಬುದಿಮಾಳ ಗ್ರಾಮದ 23 ವರ್ಷದ ಮಹಿಳೆ, ಬೊಯಿಕೇರಿಯ ನೀರುಕೊಲ್ಲಿ ಗ್ರಾಮದ ಇಬ್ನಿವಳವಾಡಿಯ 28 ವರ್ಷದ ಪುರುಷ, ಕುಶಾಲನಗರ ಬಲಮುರಿ ದೇವಾಲಯ ರಸ್ತೆಯ ನಾಗೇಗೌಡ ಬಡಾವಣೆಯ 53 ವರ್ಷದ ಮಹಿಳೆ, ಮಡಿಕೇರಿ ಜಯನಗರದ ಶಾಂತಿನಿಕೇತನ ರಸ್ತೆಯ 54 ವರ್ಷದ ಪುರುಷ, ಸೋಮವಾರಪೇಟೆ ಕೊಡ್ಲಿಪೇಟೆಯ ಬೆಂಬಳೂರುವಿನ ಸರ್ಕಾರಿ ಶಾಲೆ ಸಮೀಪದ 28 ವರ್ಷದ ಮಹಿಳೆ, ಸೋಮವಾರಪೇಟೆ ದೊಡ್ಡ ಕೊಡ್ಲೀಪೇಟೆಯ 21 ವರ್ಷದ ಮಹಿಳೆ, ಸೋಮವಾರಪೇಟೆ ಯಡವನಾಡುವಿನ 96 ವರ್ಷದ ಮಹಿಳೆ (ಮೃತಪಟ್ಟ ಪ್ರಕರಣ), ಕುಶಾಲನಗರ ಕರಿಯಪ್ಪ ಬಡಾವಣೆಯ 40 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕಿ, ಸೋಮವಾರಪೇಟೆ ಯಡೂರುವಿನ ಮಾವಿನಕಟ್ಟೆಯ 49 ಮತ್ತು 30 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ ಜೂನಿಯರ್ ಕಾಲೇಜು ಸಮೀಪದ 45 ವರ್ಷದ ಪುರುಷ, 60 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕಿ, ಕುಶಾಲನಗರ ಕರಿಯಪ್ಪ ಬಡಾವಣೆಯ 4ನೇ ಬ್ಲಾಕಿನ 70 ವರ್ಷದ ಮಹಿಳೆ, ಸುಂಟಿಕೊಪ್ಪ 7ನೇ ಹೊಸ ಕೋಟೆಯ ಅಂದಗೋವೆ ಅಂಚೆ ಕಚೇರಿ ಸಮೀಪದ 27 ವರ್ಷದ ಮಹಿಳೆ, ಸೋಮವಾರಪೇಟೆ ರೇಂಜರ್ ಬ್ಲಾಕಿನ 67 ವರ್ಷದ ಮಹಿಳೆ, ವೀರಾಜಪೇಟೆ ಕುರ್ಚಿಯ 25 ವರ್ಷದ ಪುರುಷ, ಹಾಸನದ ಅರಕಲಗೂಡುವಿನ 48 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ, ವೀರಾಜಪೇಟೆ ಬಿಟ್ಟಂಗಾಲದ ರೋಟರಿ ಶಾಲೆ ಸಮೀಪದ 41 ವರ್ಷದ ಪುರುಷ, ಮಡಿಕೇರಿ ಡೈರಿ ಫಾರಂ 2ನೇ ಹಂತದ 68 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.