ಕಣಿವೆ, ಸೆ. 16: ಮಡಿಕೇರಿ ನಗರದ ವಿವಾಹಿತ ಮಹಿಳೆ ಯೋರ್ವರಿಗೆ ಅಪರಿಚಿತ ಯುವಕ ನೋರ್ವ ತನ್ನ ಮೊಬೈಲ್‍ನಿಂದ ಮಹಿಳೆಯ ಮೊಬೈಲ್‍ಗೆ ಪದೇ ಪದೇ ಸಂದೇಶಗಳನ್ನು Pಳುಹಿಸುತ್ತಾ ಮಾನಸಿಕ ಕಿರುಕುಳ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ಹೆದ್ದಾರಿಯಲ್ಲಿ ತನ್ನ ಪಾದರಕ್ಷೆಯಿಂದ ಥಳಿಸಿ ಪೆÇಲೀಸರಿಗೊಪ್ಪಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.ನಗರದಲ್ಲಿ ಮೊಬೈಲ್ ಅಂಗಡಿ ಹಾಗೂ ಕರೆನ್ಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಎನ್ನಲಾದ ಮಹಮ್ಮದ್ ಮುದಾಸಿರ್ ಎಂಬಾತ ತಮ್ಮ ಮೊಬೈಲ್‍ಗಳಿಗೆ ಕರೆನ್ಸಿ ಹಾಕಿಸುವ ಯುವತಿಯರ ಹಾಗೂ ಮಹಿಳೆಯರ ಮೊಬೈಲ್ ನಂಬರ್‍ಗಳನ್ನು ಪಡೆದುಕೊಂಡು ಪೆÇೀಲಿ ಸಂದೇಶಗಳನ್ನು ಕಳುಹಿಸಿ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಈ ಯುವಕ ಮಹಿಳೆಗೆ ಕಳೆದ ಎರಡು ದಿನಗಳಿಂದ ರಾತ್ರಿ, ಹಗಲು ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಮಹಿಳೆ ದೂರಿದ್ದಾರೆ. ಈತನನ್ನು ಖೆಡ್ಡಾಕ್ಕೆ ಬೀಳಿಸಲು ಸಂಚು ರೂಪಿಸಿದ ಮಹಿಳೆ ಕೊಡಗು ರಕ್ಷಣಾ ವೇದಿಕೆಯ ಉಮೇಶ್ ಎಂಬವರಿಗೆ ಈತನ ಕಿರುಕುಳದ ಬಗ್ಗೆ ವಿವರಿಸಿದ್ದಾರೆ.

(ಮೊದಲ ಪುಟದಿಂದ) ನಂತರ ಈತನಿಗೆ ಸಂದೇಶವೊಂದನ್ನು ಕಳುಹಿಸಿ ‘ಹಳೇ ಆರ್‍ಟಿಓ ಕಚೇರಿ ಬಳಿ ಬರುತ್ತೇನೆ. ನೀನು ಬಾ ಮಾತನಾಡೋಣ’ ಎಂದು ಕಾದು ಕುಳಿತ ಮಹಿಳೆಗೆ ಎದುರಾದ ಆ ಯುವಕನಿಗೆ ರಕ್ಷಣಾ ವೇದಿಕ ಕಾರ್ಯಕರ್ತರು ಹಾಗೂ ಮಹಿಳೆ ಥಳಿಸಿದ್ದಾರೆ. ನಂತರ ಈತನನ್ನು ಪೆÇಲೀಸರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.