ಮಡಿಕೇರಿ, ಸೆ. 16: ಜಿಲ್ಲೆಯಲ್ಲಿ ಕಂಡುಬಂದ ಮಾದಕ ವಸ್ತು ‘ಎಂ.ಡಿ.ಎಂ.ಎ.’ ದಂಧೆಯ ಜಾಲದ ಜಾಡು ಹಿಡಿದ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದವರು ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.ಕಳೆದ ಆ. 28 ರಂದು ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆಯಾಗುತ್ತಿದ್ದಂತೆ ಇತ್ತ ಮಡಿಕೇರಿಯ ಖಾಸಗಿ ಹೊಟೇಲ್ನಲ್ಲಿ ಮಾದಕ ವಸ್ತು ‘ಎಂ.ಡಿ.ಎಂ.ಎ.’ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಸುಳಿವರಿತ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಧಾಳಿ ನಡೆಸಿದ್ದರು. ಈ ಸಂದರ್ಭ ಎರಡು ಕಾರುಗಳಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ದಂಧೆಕೋರರು ಎರಡು ಕಾರುಗಳಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಬೆನ್ನಟ್ಟಿದ ಡಿಸಿಐಬಿ ಹಾಗೂ ಪೊಲೀಸರ ತಂಡ ಗುಡ್ಡೆಹೊಸೂರಿ ನಲ್ಲಿ ಒಂದು ಕಾರನ್ನು ಅಡ್ಡಗಟ್ಟಿ ಮೂವರನ್ನು ಬಂಧಿಸಿದ್ದರು. ಮತ್ತೊಂದು ಕಾರಿನಲ್ಲಿದ್ದವರು ಕುಶಾಲನಗರ ಗೇಟ್ ಬಳಿ ಕಾರನ್ನು ಬಿಟ್ಟು ಪರಾರಿ ಯಾಗಿದ್ದರು. (ಮೊದಲ ಪುಟದಿಂದ) ಕಾರನ್ನು ಪರಿಶೀಲಿಸಲಾಗಿ ಕಾರಿನಲ್ಲಿದ್ದ 300 ಗ್ರಾಂ. ನಷ್ಟು ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.ಈ ಸಂಬಂಧ ಆರೋಪಿಗಳಾದ ಕೊಡಗಿನ ಅಯ್ಯಂಗೇರಿಯ ಮಜೀದ್, ಶಿಯಾಬುದಿನ್ ಹಾಗೂ ಬೆಂಗಳೂರು ಶಿವಾಜಿನಗರ ಮುಜಾಮಿಲ್ ಅವರುಗಳನ್ನು ಬಂಧಿಸಲಾಗಿತ್ತು. ಧಾಳಿ ಸಂದರ್ಭ ವಿದೇಶಿ ಪ್ರಜೆ, ಓರ್ವ ಮಹಿಳೆ ಹಾಗೂ ಮತ್ತೋರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಈರ್ವರ ಸೆರೆ
ಈ ಜಾಲದ ಜಾಡು ಹಿಡಿದು ತನಿಖೆ ಮುಂದುವರಿಸಿದ ಅಪರಾಧ ಪತ್ತೆದಳದ ಸಿಬ್ಬಂದಿಗಳು ಹಾಗೂ ಕಳೆದ ಶನಿವಾರ ಬೆಂಗಳೂರಿನ ಬಾಣಸವಾಡಿಯ ನಿವಾಸಿ, ಫೈಸಲ್ ಹಾಗೂ ಚಿಕ್ಕಮಗಳೂರುವಿನ ತರಿಕೆರೆಯ ಮಹಿಳೆ ಸಾರ (ಸಾರಾಬಾನ್) ಎಂಬಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ.
ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯಿದ್ದು, ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮಾಂತರ ಠಾಣಾಧಿಕಾರಿ ಅಪರಾಧ ಪತ್ತೆದಳದ ಪ್ರಭಾರ ನಿರೀಕ್ಷಕರಾಗಿರುವ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.