*ಗೋಣಿಕೊಪ್ಪಲು, ಸೆ. 15 : ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಭಾರೀ ಮೊತ್ತದ ಅನುದಾನ ಇದಕ್ಕೆ ಬಳಕೆಯಾಗುತ್ತಿದೆ. ಈ ರೀತಿಯ ಆರ್ಥಿಕ ಸಂಕಷ್ಟದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿದ್ದ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಚನ್ನಂಗೊಲ್ಲಿ ಪೈಸಾರಿ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿಗಾಗಿ ಶಾಸಕರ ಅನುದಾನದಲ್ಲಿ ಮಂಜೂರಾದ ರೂ. 10 ಲಕ್ಷ ವೆಚ್ಚದ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚನ್ನಂಗೊಲ್ಲಿ ಪೈಸಾರಿ ರಸ್ತೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಲ್ಲಿದ್ದ ವ್ಯಾಜ್ಯ ಇದೀಗ ಇತ್ಯರ್ಥಗೊಂಡಿದೆ. ಈ ಕಾರಣದಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಮುಂದೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಭಾಗದ ಜನತೆಯ ಮತ್ತೊಂದು ಬೇಡಿಕೆಯಾದ ಕುಡಿಯುವ ನೀರಿಗೂ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದ ಕೆ.ಜಿ. ಬೋಪಯ್ಯ ಅವರು, ಈ ರಸ್ತೆ ಕಿರಿದಾಗಿದ್ದು ಎರಡು ಭಾಗ ದಲ್ಲಿರುವ ತೋಟದ ಮಾಲೀಕರು ಕನಿಷ್ಟ ತಲಾ2 ಅಡಿ ರಸ್ತೆಗಳನ್ನು ಬಿಟ್ಟು ಚರಂಡಿ ಕಾಮಗಾರಿಗಾಗಿ ಸಹಕಾರ ನೀಡಬೇಕು. ಚರಂಡಿಗಳಿದ್ದರೆ ಮಾತ್ರ ರಸ್ತೆ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಅಕ್ರಮ - ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ, ಮೂಕೊಂಡ ಶಶಿ ಸುಬ್ರಮಣಿ, ಗೋಣಿಕೊಪ್ಪಲು ಎಪಿಎಂಸಿ ಸದಸ್ಯ ಕಿಲನ್ ಗಣಪತಿ, ಪೆÇನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಗೋಣಿಕೊಪ್ಪಲು ಗ್ರಾ.ಪಂ.ಸದಸ್ಯ ಮಂಜು ರೈ, ಪೆÇನ್ನಂಪೇಟೆ ಗ್ರಾ.ಪಂ. ಸದಸ್ಯ ಅಮ್ಮತ್ತಿರ ಸುರೇಶ್, ವೀರಾಜಪೇಟೆ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರಾಜೇಶ್, ಬಿಜೆಪಿ ಪ್ರಮುಖರಾದ ಪಂದ್ಯಂಡ ಹರೀಶ್, ವಾಟೇರಿರ ಬೋಪಣ್ಣ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಚನ್ನಂಗೊಲ್ಲಿಯ ನಾಗರಿಕ ಪ್ರಮುಖರಾದ ಕಂಜಿತಂಡ ಪೆÇನ್ನಪ್ಪ, ರಾಜ ಸೇರಿದಂತೆ ಗ್ರಾಮವಾಸಿಗಳು ಪಾಲ್ಗೊಂಡಿದ್ದರು.