ಮಡಿಕೇರಿ, ಸೆ. 15: ಕೆಎಸ್‍ಆರ್‍ಟಿಸಿನಲ್ಲಿ ಪ್ರಯಾಣಿಕರ ಲಗೇಜ್ ಬ್ಯಾಗ್ ಮತ್ತು ಬಸ್‍ಗಳಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನನ್ನು ಪೆÇಲೀಸರು ಬಂಧಿಸಿದ್ದಾರೆ.
ತಾ. 16.1.2020 ರಂದು ಪ್ರೇಮ ಟಿ. ಎಂಬವರು ರಾಮನಗರದಿಂದ ಮಡಿಕೇರಿಗೆ ಹೋಗುವ ವೇಳೆ ಲಗೇಜ್ ಬ್ಯಾಗ್ ಕ್ಯಾರಿಯರ್ ನಲ್ಲಿ ಇಟ್ಟಿದ್ದರು. ಮೈಸೂರು ನಗರದಲ್ಲಿ ಬಸ್ ನಿಂತಾಗ ಬ್ಯಾಗ್ ನೋಡಿದಾಗ ಸ್ಥಳದಲ್ಲಿ ಇರಲಿಲ್ಲ. ಅದರಲ್ಲಿ 89 ಗ್ರಾಂ. ತೂಕದ ಆಭರಣಗಳಿದ್ದವೆಂದು ಲಷ್ಕರ್ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇಲೆ ಪತ್ತೆ ಕಾರ್ಯ ಆರಂಭಿಸಿದ ಪೆÇಲೀಸರು ಬಸ್ ನಿಲ್ದಾಣದಲ್ಲಿ ಗಸ್ತು ನಡೆಸಿದ್ದರು.
ಇಂದು ಠಾಣಾ ಸಿಬ್ಬಂದಿ ಮಂಜುನಾಥ್ ಮತ್ತು ಪ್ರತೀಪ, ಚಿನ್ನಪ್ಪ ಕಲ್ಲೋಳಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಠಾಣೆಯ ಹಳೆಯ ಎಂ.ಒ ಅಸಾಮಿ ಮಡಿಕೇರಿಯ ತ್ಯಾಗರಾಜ್ ಕಾಲೋನಿಯ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಇಮ್ರಾನ್ (37) ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ತಾನು ಇಸ್ಪೀಟ್ ಆಟ ಆಡುತ್ತಿದ್ದು ತುಂಬಾ ಸಾಲ ಮಾಡಿಕೊಂಡಿದ್ದೆ. ಸಾಲಗಾರರ ಕಾಟ, ಮನೆಯ ನಿರ್ವಹಣೆಗೆ ಕಳ್ಳತನಕ್ಕೆ ಇಳಿದಿರುವುದಾಗಿ ತಪೆÇ್ಪಪ್ಪಿಕೊಂಡಿ ದ್ದಾನೆ. ಬಂಧಿತನಿಂದ 13,85,000 ರೂ. ಬೆಲೆ ಬಾಳುವ 277 ಸುಮಾರು ಗ್ರಾಂ. ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಡಾ. ಎ.ಎನ್. ಪ್ರಕಾಶ್ ಗೌಡ, ಗೀತ ಪ್ರಸನ್ನ, ದೇವರಾಜ ಎಸಿಪಿ ಪೂರ್ಣಚಂದ್ರತೇಜಸ್ವಿ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ಪಿಐ ಸುರೇಶ್ ಕುಮಾರ್ ಉಸ್ತುವಾರಿಯಲ್ಲಿ ಪಿಎಸ್ ಐ ಗೌತಮ್ ಗೌಡ, ಧನಲಕ್ಷ್ಮಿ, ಸಿಬ್ಬಂದಿಗಳಾದ ಲೋಕೇಶ್, ಮಹದೇವಸ್ವಾಮಿ, ಬೋಪಯ್ಯ, ಆದಂ, ಮಂಜುನಾಥ್, ಲೋಲಾಕ್ಷಿ, ಆರಾಧ್ಯ, ಕುಮಾರ್, ಶ್ಯಾಮ್ ಪಾಲ್ಗೊಂಡಿದ್ದರು.