ವೀರಾಜಪೇಟೆ, ಸೆ. 15 : ಮನೆಯಲ್ಲಿಯೇ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆ ಇಲ್ಲಿನ ಅಮ್ಮತ್ತಿ ಒಂಟಿಯಂಗಡಿ ಕಣ್ಣಂಗಾಲ ಗ್ರಾಮದ ಮಹಿಳೆಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಗ್ರಾಮಸ್ಥರು ನೀಡಿದ ದೂರಿನ ಪೊಲೀಸರು ಇಂದು ಮನೆಯನ್ನು ಶೋಧಿಸಿದಾಗ ಎರಡು ಲೀಟರ್‍ಗಳಷ್ಟು ಸಾರಾಯಿ ಹಾಗೂ ಕಳ್ಳಬಟ್ಟಿ ತಯಾರಿಸಲು ಸಿದ್ಧತೆ ಮಾಡಿದ್ದ ಪುಳಗಂಜಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.