ಮಡಿಕೇರಿ, ಸೆ. 15 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 28 ಕ್ಕೇರಿದೆ. ಎಮ್ಮೆಮಾಡು ಗ್ರಾಮದ ನಿವಾಸಿ 50 ವರ್ಷದ ಪುರುಷರೊಬ್ಬರು ಈ ಹಿಂದಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರಿಗೆ ಪಾಶ್ರ್ವವಾಯು ಆಗಿತ್ತು. ಪಾಶ್ರ್ವವಾಯು ಕಾಯಿಲೆಗೆ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ತಾ. 8 ರಂದು ಕಫ ಸಮಸ್ಯೆಯಿಂದ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ (ಅಶ್ವಿನಿ ಆಸ್ಪತ್ರೆಗೆ) ಬಂದು ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಯ ಐ.ಸಿ.ಯು ಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸಿದ್ದು, ತಾ. 15 ರಂದು ಬೆಳಿಗ್ಗೆ 8 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ 33 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2075 ಪ್ರಕರಣಗಳು ವರದಿಯಾಗಿದ್ದು, 1661 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 28 ಮಂದಿ ಸಾವನ್ನಪ್ಪಿದ್ದು, 387 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಾಯಂತ 362 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿ ಚೈನ್ ಗೇಟಿನ 13 ವರ್ಷದ ಬಾಲಕ, ಸೋಮವಾರಪೇಟೆ ಬಾಳಗುಂದದ 56 ವರ್ಷದ ಮಹಿಳೆ, ಸಿದ್ದಾಪುರ ಗುಹ್ಯದ ಬಿಜಿಎಸ್ ಶಾಲೆ ಸಮೀಪದ 21 ವರ್ಷದ ಮಹಿಳೆ, ಕೂಡಿಗೆಯ ಹಾಸನ ರಸ್ತೆ ವೃತ್ತದ 27 ವರ್ಷದ ಮಹಿಳೆ, ಮಡಿಕೇರಿ ತಾಳತ್ತಮನೆಯ ಕಾಟಕೇರಿಯ 4ನೇ ಕ್ರಾಸ್ ನ 29 ವರ್ಷದ ಪುರುಷ, ಮಡಿಕೇರಿ ಪೆನ್‍ಷನ್ ಲೈನಿನ ಟೌನ್ ಹಾಲ್ ಹಿಂಭಾಗದ 47 ವರ್ಷದ ಪುರುಷ ಮತ್ತು 68 ವರ್ಷದ ಮಹಿಳೆ, ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ ಬಸವೇಶ್ವರ ಬಡಾವಣೆ 2ನೇ ಬ್ಲಾಕಿನ 55 ವರ್ಷದ ಮಹಿಳೆ, ಮಡಿಕೇರಿ ಹೊದವಾಡ ಬುಲಿಬಾಣೆಯ 38 ವರ್ಷದ ಪುರುಷ, ಮಡಿಕೇರಿ ಇಂದಿರಾನಗರ ಅಂಗನವಾಡಿ ಬಳಿಯ 23 ವರ್ಷದ ಮಹಿಳೆ ಮತ್ತು 53 ವರ್ಷದ ಪುರುಷ, ತಿತಿಮತಿ ಗ್ರಾಮದ ನೊಕ್ಯ ಅಂಚೆಯ ಎಡೆತೊರೆ ಗ್ರಾಮದ 28 ವರ್ಷದ ಮಹಿಳೆ, ಗೋಣಿಕೊಪ್ಪ ಎಚ್.ಸಿ ಪುರದ ಆರ್.ಎಂ.ಸಿ ಸಮೀಪದ 32 ವರ್ಷದ ಪುರುಷ, ಗೋಣಿಕೊಪ್ಪದ ಕಳತ್ಮಾಡುವಿನ ಜಿಎಂಪಿ ಶಾಲೆ ಸಮೀಪದ 49 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕಿ, ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಫ್ಯಾಕ್ಟರಿ ಸಮೀಪದ 10 ತಿಂಗಳ ಹೆಣ್ಣು ಮಗು, ಗೋಣಿಕೊಪ್ಪ ಎಚ್.ಸಿ ಪುರದ ಪಿಆರ್ ಫರ್ನೀಚರ್ ಸಮೀಪದ ಜೆ.ಬಿ ಕಾಂಪ್ಲೆಕ್ಸಿನ 42 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ಕುಶಾಲನಗರ ಹೆಬ್ಬಾಲೆ ಮುಖ್ಯ ರಸ್ತೆಯ 58 ವರ್ಷದ ಪುರುಷ, ಕುಶಾಲನಗರ ಬಲಮುರಿ ದೇವಾಲಯ ಬಳಿಯ 4ನೇ ಬ್ಲಾಕಿನ 30 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆ, ಕಡಂಗ ಗ್ರಾಮದ 11 ವರ್ಷದ ಬಾಲಕಿ, ವೀರಾಜಪೇಟೆ ಗಾಂಧೀನಗರದ 47 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿಯ 33 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ 32 ವರ್ಷದ ಮಹಿಳೆ, ಸೋಮವಾರಪೇಟೆ ತಾಳತ್ತರ ಶೆಟ್ಟಳ್ಳಿಯ ಬೈರವೇಶ್ವರ ದೇವಾಲಯ ಬಳಿಯ 73 ವರ್ಷದ ಪುರುಷ, ಮಡಿಕೇರಿ ನಾಪೆÇೀಕ್ಲುವಿನ ಹಳೆತಾಲೂಕುವಿನ 39 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆ ಬಸವೇಶ್ವರ ಬಡಾವಣೆಯ 2ನೇ ಹಂತದ 50 ವರ್ಷದ ಮಹಿಳೆ, ಮಡಿಕೇರಿ ಡಿಟಿಸಿ ಸುದರ್ಶನ ಎಕ್ಸ್ ಟೆಂಷನ್ನಿನ 39 ವರ್ಷದ ಪುರುಷ, ಮಡಿಕೇರಿ ದೇಚೂರುವಿನ ಗಣಪತಿ ದೇವಾಲಯ ಸಮೀಪದ 66 ವರ್ಷದ ಪುರುಷ, ಮಡಿಕೇರಿ ಪೆನ್ ಷನ್ ಲೇಔಟಿನ ಟೌನ್ ಹಾಲ್ ಹಿಂಭಾಗದ 12 ವರ್ಷದ ಬಾಲಕಿ, ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಪೆÇಲೀಸ್ ವಸತಿಗೃಹದ 55 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.