ಭಕ್ತಿ ಮತ್ತು ಭಗವಂತನ ನಡುವೆ ನಡೆವ ಸಂಭಾಷಣೆ ಪ್ರಾರ್ಥನೆ. ಅರ್ಥಾತ್ ಭಕ್ತಿ, ತನ್ನದೆಲ್ಲವನ್ನು ಭಗವಂತನಿಗೆ ಸಮರ್ಪಣೆ ಮಾಡುವ ನಿರ್ಮಲ ಭಕ್ತಿಗೆ ಭಗವಂತ ಒಲಿಯುವನೆನ್ನುವ ಸತ್ಯವನ್ನು ನಾವು ಓದಿ, ಕೇಳಿ ತಿಳಿದ್ದಿದ್ದೇವೆ. ನೇಗಿಲ ಯೋಗಿಯೊಬ್ಬನ ಭಕ್ತಿಗೆ ಭಗವಂತ ಆಕರ್ಷಿತ ನಾದ ಪರಿ ಅನನ್ಯ. ಬಡ ರೈತನೊಬ್ಬನ ನಿತ್ಯ ಕಾಯಕ-ಹೊಲ ಹಸನು ಗೊಳಿಸುವುದು, ಸಸಿಮಡಿ ತಯಾರಿಸುವುದು, ನಾಟಿ ಹಾಕುವುದು ತದನಂತರ ಉತ್ತು-ಬಿತ್ತಿ ಬೆಳೆದ ಬೆಳೆ ಪಸಲಿಗೆ ಬಂದಾಗ ಕಟಾವು ಮಾಡುವುದು, ಫಸಲನ್ನು ಮಾರಾಟ ಮಾಡಿ ಅಲ್ಪ-ಸ್ವಲ್ಪ ಲಾಭಗಳಿಸುವುದು, ಅದರಿಂದ ಜೀವನ ನಿರ್ವಹಣೆ ಇದು ನಿರಂತರ ಪ್ರಕಿೃಯೆ. ಧಾನ್ಯಲಕ್ಷ್ಮಿ ಯನ್ನು ಮನೆತುಂಬಿಕೊಳ್ಳಲು ರೈತನ ಕಾಯಕಕ್ಕೆ ಮಡದಿ, ಮಕ್ಕಳು ಮುಕ್ತ ಮನಸ್ಸಿನಿಂದ ಊರುಗೋಲಾಗಿ ನಿಲ್ಲುತ್ತಿದ್ದರು. ಅಹರ್ನಿಷಿ ದುಡಿವ ಈ ಶ್ರಮದ ಜೀವನದ ರೈತ ‘ಓಂ ನಮೋ ನಾರಾಯಣ’ ಎಂಬ ನಾಮಜಪವನ್ನು ಬಿಡದೆ ಮಾಡುತ್ತಿದ್ದ. ಪೂರ್ವ ದಿಗಂತದಲ್ಲಿ ಮೋಡಗಳ ಮರೆಯಿಂದ ಸೂರ್ಯನ ಹೊಂಗಿರಣಗಳು ಒಡಮೂಡುತ್ತಿದ್ದಂತೆ ಒಮ್ಮೆ ಹಾಗೂ ದಿನದ ಕಠಿಣ ಪರಿಶ್ರಮದ ದುಡಿಮೆಯ ನಂತರ ಮುಸ್ಸಂಜೆಯಲ್ಲೊಮ್ಮೆ ದೇವರ ನಾಮಸ್ಮರಣೆ ಮಾಡಿ ಮನದಾಳದ ಭಕ್ತಿಯಿಂದ ದಿನದ ನೋವು-ನಲಿವುಗಳನ್ನು ಭಗವಂತನಿಗರ್ಪಿಸಿ ಧನ್ಯನಾಗುತ್ತಿದ್ದ, ಕಾಯಕ ಯೋಗಿ ಬಸವಣ್ಣನವರ ‘‘ಕಾಯಕವೇ ಕೈಲಾಸ’’ವೆಂಬ ಮಾತಿನಂತೆ ದುಡಿಮೆಯಿಂದಲೇ ಪಾವನನಾಗುತ್ತಿದ್ದ ಮೈಕುಂಠ ಪತಿ ಮಹಾವಿಷ್ಣು ಅವನ ಭಕ್ತಿಯನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದ, ಜೊತೆಗೆ ತನ್ನಲ್ಲಿಗೆ ಬಂದ ನಾರದ ಮಹರ್ಷಿಗಳ ಎದುರು ಅದನ್ನು ಆಡಿಯೂ ತೋರಿದ. ನಾರದರೆ ಈ ರೈತನೊಬ್ಬ ಶ್ರೇಷ್ಠ ಭಕ್ತನಾಗಿದ್ದಾನೆ ಎಂದು ಉದ್ಗರಿಸಿದ ವಿಷ್ಣು. ಆದರೆ, ಯಾಕೋ ನಾರದರಿಗೆ ಈ ಮಾತು ಹಿಡಿಸಲಿಲ್ಲ. ನನಗಿಂತಲೂ ನಿನ್ನನ್ನು ಜಪಿಸುವ ಭಕ್ತರು ಜಗತ್ತಿನಲ್ಲಿ ಇರಲಾರರು. ಕುಳಿತಲ್ಲಿ, ನಿಂತಲ್ಲಿ, ದಿನದಲ್ಲಿ ನೂರಾರು ಬಾರಿ ನಾರಾಯಣ-ನಾರಾಯಣ ಎನ್ನುವ ನಾನೇ ನಿನ್ನ ಶ್ರೇಷ್ಠ ಭಕ್ತ. ನನಗೆ ನಿನ್ನ ನಾಮಸ್ಮರಣೆ ಬದುಕಿನ ಒಂದು ಭಾಗವೇ ಎನ್ನುವ ಆಂಬೋಣ ಬೇರೆ.

ಮಹಾವಿಷ್ಣು ಮನದಲ್ಲಿಯೇ ವಜ್ರದ ಹರಳುಗಳು ತುಂಬಿ ತುಳುಕುತ್ತಿರುವ ಹರಿವಾಣವೊಂದನ್ನು ನಾರದರ ಕೈಗಿತ್ತು ಭೂಲೋಕವನ್ನು ತ್ವರಿತವಾಗಿ ಸುತ್ತಿಬರುವಂತೆ ಸೂಚಿಸಿದ. ಆದರೆ, ಎಚ್ಚರಿಕೆ ಇದರಲ್ಲಿನ ಒಂದು ಹರಳು ನೆಲಕ್ಕೆ ಬಿದ್ದರೆ ನೀನು ಮಾತಿಗೆ ತಪ್ಪಿದಂತೆ ಎಂದು ವಿಷ್ಣು ನುಡಿದ. ಮಹಾವಿಷ್ಣು ತನಗೆ ವಹಿಸಿದ ಕೆಲಸದಲ್ಲಿ ಕಿಂಚಿತ್ತೂ ಲೋಪವಾಗದಂತೆ ಪೂರ್ಣಗೊಳಿಸಿ ಬಂದ ನಾರದರನ್ನು ಸ್ವಾಗತಿಸುತ್ತಾ ವಿಷ್ಣುವು ಈ ನಿನ್ನ ಏಕಾಗ್ರತೆಯ ಕೆಲಸದ ನಡುವೆ ನನ್ನನ್ನು ಎಷ್ಟು ಬಾರಿ ಸ್ಮರಿಸಿ ಕರೆದೆ ಎಂದು ಪ್ರಶ್ನಿಸಿದ. ಆದರೆ, ಹರಳುಗಳು ಎಲ್ಲಿ ಉರುಳಿ ಹೋಗುವವೋ ಎನ್ನುವ ಭಯದಲ್ಲಿ ಮನಸ್ಸನ್ನು ಕಾಯಕದಲ್ಲಿ ಏಕಾಗ್ರಗೊಳಿಸಿದ್ದರಿಂದ ಒಮ್ಮೆಯೂ ನಿನ್ನ ಸ್ಮರಣೆ ಮಾಡಲಾಗಲಿಲ್ಲ ಎಂದುತ್ತರಿಸಿದ ನಾರದ.

ನಾನು ಬಡ ರೈತನನ್ನು ಶ್ರೇಷ್ಠಭಕ್ತನೆಂದು ಏಕೆ ಕರೆದೆನೆಂದು ಈಗ ತಿಳಿಯಿತೇ ? ರೈತ ನಿರಂತರ ಶ್ರಮದ ಕಾಯಕದಿಂದ ದಣಿದ ದೇಹದವನಾದರೂ ಅದರ ನಡುವೆಯೇ ದಿನಕ್ಕೆ ಎರಡು ಬಾರಿ ತಪ್ಪದೇ ನನ್ನ ನಾಮಸ್ಮರಣೆ ಮಾಡುತ್ತಾನೆ. ಆದರೆ, ನಿನಗೆ ನಾನು ಕೊಟ್ಟ ಕೆಲಸ ಪೂರ್ಣಗೊಳಿಸುವ ಭರದಲ್ಲಿ ಒಮ್ಮೆಯೂ ನನ್ನ ನಾಮ ಜಪಿಸಲಾಗಲಿಲ್ಲ. ಈಗ ಹೇಳು ಯಾವ ಭಕ್ತಿ ಶ್ರೇಷ್ಠ ಎಂದು ವಿಷ್ಣುವು ನಾರದನನ್ನು ಕೇಳಿದ.

ಗರ್ಭಗುಡಿಯೊಳಗಿನ ಗಂಟೆ, ಜಾಗಟೆ, ಧೂಪ, ದೀಪಗಳ ಆರಾಧನೆಯಿಂದ ಭಕ್ತಿ ಭಗವಂತನನ್ನು ತಲಪುವದಕ್ಕಿಂತಲೂ ನಿರ್ಮಲ ಮನಸ್ಸಿನ ಏಕೋಭಾವದ ನೈಜ ಭಕ್ತಿ ದೇವರಿಗೆ ಹೆಚ್ಚು ಪ್ರಿಯ. ಶ್ರೀಕೃಷ್ಣನಿಗೆ ಭಕ್ತ ಕುಚೇಲನ ಅವಲಕ್ಕಿ ಪ್ರಿಯವಾದಂತೆ !

ಹಗಲಿರುಳೆನ್ನದೆ ದುಡಿಯುವ ಧಾರ್ಮಿಕ, ಅನ್ನ ನೀಡುವ ರೈತ, ‘I ಚಿm ಚಿ sohಟಜieಡಿ, boಡಿಟಿ ಣo ಜie’’ ಎನ್ನುತ್ತಾ ದೇಶ ಕಾಯುವ ಯೋಧ-ಇವರೆಲ್ಲರ ಕಾಯಕ ಯಾವ ಪೂಜೆಗಿಂತಲೂ ಕಡಿಮೆಯಲ್ಲ.

ಹೌದು ಇಂದಿನ ಈ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಕೊರೊನಾ ಯೋಧರ ಸೇವೆಯೇ ಧನ್ಯ. ಜೊತೆಗೆ ತಮ್ಮ ಪ್ರಾಣ ಒತ್ತೆಯಿಟ್ಟು ಸಂಕಷ್ಟದಲ್ಲಿ ಸಿಲುಕಿದವರ ಪ್ರಾಣ ರಕ್ಷಣೆ ಮಾಡುವ ಓ.ಆ.ಖ.ಈ. oಡಿ S. ಆ. ಖ. ಈ. ನಂತಹ ತಂಡಗಳ ಕಾಯಕ ಸರ್ವಶ್ರೇಷ್ಠ ವಿಶ್ವ ವ್ಯಾಪಿಯಾದ ಈ ರೋಗವನ್ನು ದುರ್ಬಲಗೊಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ, ಸರಕಾರದ ಮಾರ್ಗ ಸೂಚಿಗಳನ್ನು ಅನುಸರಿಸುತ್ತಾ, ವೈದ್ಯಾಧಿಕಾರಿಗಳ ಮಾರ್ಗ, ಸಲಹೆ, ಸೂಚನೆಗಳನ್ನು ಪಾಲಿಸುತ್ತಾ ತಮ್ಮ ಕರ್ತವ್ಯಗಳಲ್ಲಿ ಭಕ್ತಿ, ಶಕ್ತಿಗಳಿಂದ ತೊಡಗಿಸಿಕೊಂಡರೆ ಅದುವೇ ದೇಶ ಕಟ್ಟುವ ಮಹತ್ಕಾರ್ಯ ಅದೇ ನಿಜವಾದ ಭಕ್ತಿ. ಜೀವ ಜೀವಗಳನ್ನು ರೋಗ ಮುಕ್ತಗೊಳಿಸುವ ಪೂಜೆ !

?ಕಟ್ಟೇರ ಸುಶೀಲ,

ಶ್ರೀಮಂಗಲ.