ಸಿ. ಎಸ್ ಸುರೇಶ್, ಇವರು ಕಗ್ಗೋಡ್ಲು ಗ್ರಾಮದವರು. ಸಿ. ಎಸ್. ಶಂಕರನಾರಾಯಣ, ಪ್ರಭಾವತಿ ದಂಪತಿಗಳ ಪುತ್ರನಾದ ಸುರೇಶ್ 1969ರ ಮಾರ್ಚ್ 3 ರಂದು ಜನಿಸಿದರು. ಮೇಕೇರಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಡಿಕೇರಿ ಸಂತ ಮೈಕಲ್ಲರ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಮತ್ತು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿ ಎಸ್ಸಿ ಮುಗಿಸಿ ಸರ್ವೋದಯ ಕಾಲೇಜು ವೀರಾಜಪೇಟೆಯಲ್ಲಿ ಬಿ ಎಡ್, ಧಾರವಾಡದ ಕೃಷಿ ಕೇಂದ್ರದಿಂದ ಕೃಷಿ ಪತ್ರಿಕೋದ್ಯಮ ಕೈಗೊಂಡು ಕ್ಯಾಮ್ ಫೆಲೋ ಗೌರವ ಪಡೆದಿದ್ದಾರೆ.
ನೇತಾಜಿ ಪ್ರೌಢಶಾಲೆ ಬಲ್ಲಮಾವಟಿಯಲ್ಲಿ ಪದವೀಧರ ಗಣಿತ ಶಿಕ್ಷಕರಾಗಿ ವೃತ್ತಿ ಜೀವನದ ಜೊತೆಗೆ ಕೃಷಿ, ಸಂಸ್ಕøತಿ, ಸಾಹಿತ್ಯ ಬರಹಗಳನ್ನು ಮುಂದುವರಿಸಿದ ಸುರೇಶ್, ಪ್ರಜಾವಾಣಿ ಪತ್ರಿಕೆಯ ನಾಪೆÇೀಕ್ಲು ವರದಿಗಾರರಾಗಿ, ಶಕ್ತಿ ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುವ ಪದಬಂಧ ಮತ್ತು ಕ್ವಿಜ್ ಅಂಕಣಕಾರರಾಗಿದ್ದಾರೆ. ಇವರು ಕೊಡಗು ದೇವಾಲಯಗಳ ದರ್ಶನ, ಮನರಂಜನಾ ಗಣಿತ, ಕೊಡಗಿನ ಧಾರ್ಮಿಕ ಕೇಂದ್ರಗಳು ಮತ್ತು ಗ್ರಾಮೀಣ ಉತ್ಸವಗಳು ಎಂಬ ಮೂರು ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿರುವ ಇವರು ಅನೇಕ ಕ್ವಿಜ್ ಕಾರ್ಯಕ್ರಮಗಳ ಆಯೋಜನೆ ಮಾಡಿರುತ್ತಾರೆ. ಬಿಳಿಗೇರಿ ಗ್ರಾಮದ ಛಾಯಾಚಿತ್ರ ಗ್ರಾಹಕರಾದ ಎಂ. ಎನ್. ಕುಮಾರ್ ಹಾಗೂ ಪತ್ರಕರ್ತರಾದ ಅನಿಲ್ ಹೆಚ್. ಟಿ. ಇವರೊಡನೆ ಹಲವು ಚಿತ್ರಲೇಖನಗಳÀನ್ನು ರಚಿಸಿದ್ದಾರೆ.
2015ರಲ್ಲಿ ಇವರಿಗೆ ಕೊಡಗು ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ದೊರಕಿದೆ. 2017ನೆಯ ಇಸವಿಯಲ್ಲಿ ರೋಟರಿ ಕ್ಲಬ್ ಮಡಿಕೇರಿ ವತಿಯಿಂದ ನೇಶನ್ಸ್ ಬಿಲ್ಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಾಪೆÇೀಕ್ಲು ಹೋಬಳಿಯ ಅಧ್ಯಕ್ಷರಾಗಿರುವ ಇವರು ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ ಅನುಭವವನ್ನು ಹೊಂದಿದ್ದಾರೆ. ಇವರಿಗೆ ಪತ್ನಿ ವಿದ್ಯಾ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಪುತ್ರಿ ಅಪೇಕ್ಷಾ ಸುರತ್ಕಲ್ ಎನ್‍ಐಟಿಕೆ ನಾಲ್ಕನೆ ವರ್ಷದ ವಿದ್ಯಾರ್ಥಿನಿ ಯಾದರೆ, ಪ್ರತೀಕ್ಷಾ - ಜೆಎಸ್‍ಎಸ್ ಮೈಸೂರಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಇವರು ನಾಪೆÇೀಕ್ಲುವಿನಲ್ಲಿ ಖಾಯಂ ವಾಸವಿದ್ದಾರೆ. ಸಾಹಿತ್ಯದ ಆಸಕ್ತಿ ಉಳಿಸಿಕೊಂಡು ಕನ್ನಡ ನಾಡಿನ ನೆಲ-ಜಲ ರಕ್ಷಿಸುವ ಜವಾಬ್ದಾರಿ ನಮ್ಮದಾಗಿರಲಿ ಎಂದು ಇಂದಿನ ನವ ಪೀಳಿಗೆಗೆ ಕಿವಿಮಾತು ಹೇಳುವ ಸುರೇಶ್ ಅವರ ಸಾಹಿತ್ಯ ಸೇವೆ ಮುಂದುವರಿಯಲಿ ಎಂದು ಹಾರೈಸೋಣ.
-ವೈಲೇಶ್ ಪಿ. ಎಸ್.
ಕೊಡಗು.