ನಾಪೆÇೀಕ್ಲು, ಸೆ. 12: ಕುಡಿದ ಅಮಲಿನಲ್ಲಿ ಜಗಳವಾಡಿ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಸಮೀಪದ ಕಾರುಗುಂದ ಗ್ರಾಮದ ಕಡಿಯತ್ತೂರಿನಲ್ಲಿ ನಡೆದಿದೆ.
ವಸಿಷ್ಠ (57) ಅವರನ್ನು ಕೊಲೆ ಮಾಡಿದ ಮಗ ಚೇತನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ವಸಿಷ್ಠ ಪ್ರತಿನಿತ್ಯ ಕುಡಿದ ಮತ್ತಿನಲ್ಲಿ ಪತ್ನಿ ಹಾಗೂ ಮಗ ಚೇತನ್‍ನೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಚೇತನ್ ಕಬ್ಬಿಣದ ಊದುಕೊಳವೆಯಿಂದ ತಲೆ, ಹಣೆ, ಕುತ್ತಿಗೆ, ಭುಜ, ಕೈ, ಕಾಲುಗಳಿಗೆ ಬಲವಾಗಿ ಹೊಡೆದಿದ್ದ ಎನ್ನಲಾಗಿದ್ದು, ನಂತರ ಆತನೆ ಅದಕ್ಕೆ ಔಷಧಿ ಹಚ್ಚಿದ್ದಾನೆ ಆದರೆ ಗಾಯದ ತೀವ್ರತೆಯ ಹಿನ್ನೆಲೆಯಲ್ಲಿ ವಸಿಷ್ಠ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.