ಮಡಿಕೇರಿ, ಸೆ. 12: ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಹೆಚ್. ಮಹದೇವ್ ಸೇರಿದಂತೆ ಅಲ್ಲಿನ ಇತರ 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ ಹೋಂ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ.
ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೈನಂದಿನ ಕರ್ತವ್ಯದೊಂದಿಗೆ, ಪೊಲೀಸ್ ವಸತಿಯಲ್ಲಿದ್ದ ಈ 9 ಮಂದಿಗೆ ಆರೋಗ್ಯ ತಪಾಸಣೆ ಸಂದರ್ಭ ಸೋಂಕು ದೃಢಪಟ್ಟಿರುವ ಕಾರಣ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಠಾಣಾಧಿಕಾರಿ ಸಹಿತ ಎಲ್ಲ ಕೊರೊನಾ ಸೋಂಕಿತ ಸಿಬ್ಬಂದಿ ಆರೋಗ್ಯದಿಂದ ಇದ್ದು, ಗುಣಮುಖರಾಗುತ್ತಿದ್ದಾರೆ ಎಂದು ಮೇಲಾಧಿಕಾರಿಗಳು ‘ಶಕ್ತಿ’ಯೊಂದಿಗೆ ದೃಢಪಡಿಸಿದ್ದಾರೆ.
ಮಡಿಕೇರಿ ನಗರ ಠಾಣೆಯ 17 ಮಂದಿ ಕೊರೊನಾ ಸೋಂಕಿನಿಂದ ಚಿಕಿತ್ಸೆಗೆ ಒಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದು.