ಮಡಿಕೇರಿ, ಸೆ. 12: ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ನಿನ್ನೆ ದಿನ ವ್ಯಾಲಿವ್ಯೂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್‍ನ ಕಾರ್ಯಕಾರಿಣಿ ಸಭೆಯಲ್ಲಿ ಕಲಹವೇರ್ಪಟ್ಟ ಬಗ್ಗೆ ತಿಳಿದುಬಂದಿದೆ. ಕಾರ್ಯಕಾರಿಣಿ ಸಭೆಗೆ ತಮ್ಮನ್ನು ಆಹ್ವಾನಿಸಲಿಲ್ಲ; ಪಕ್ಷಕ್ಕಾಗಿ ದುಡಿಯು ತ್ತಿರುವವರನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕಾಗಿ ಜಿಲ್ಲಾ ಕಾಂಗ್ರೆಸ್‍ನ ಕೆಲ ನಾಯಕರು ಹಾಗೂ ಕಾರ್ಯಕರ್ತರ ಗುಂಪು ಸಭೆ ನಡೆಯುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದೆ. ಈ ವೇಳೆ ಕೆ.ಪಿ.ಸಿ.ಸಿ. ನಿರ್ದೇಶನದಂತೆ ತಾನು ಕಾರ್ಯಕಾರಿಣಿ ಸಭೆಯನ್ನು ಮಾತ್ರ ಕರೆದಿದ್ದು, ಉಳಿದವರು ಸಭೆಯಿಂದ ಹೊರಗಿರುವಂತೆ ಸಲೀಮ್ ಅಹಮದ್ ಸೂಚಿಸಿದರೆನ್ನಲಾಗಿದ್ದು, ಈ ಹಿನ್ನೆಲೆ ಯಲ್ಲಿ ಅಸಮಾಧಾನಿತ ಗುಂಪು ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾಧಿಯಾಗಿ ಕೆಲ ನಾಯಕರ ವಿರುದ್ಧವೂ ಹರಿಹಾಯ್ದಿದೆ. ಏಕ ವಚನದ ಬೈಗುಳಗಳೂ ಹರಿದಾಡಿವೆ.ಪರಿಸ್ಥಿತಿ ಕೈಮೀರಿ ಪರಸ್ಪರ ತಳ್ಳಾಟವೂ ನಡೆದಿದ್ದು, ಅಸಭ್ಯವಾಗಿ ವರ್ತಿಸಿದವರ ಬಗ್ಗೆ ಸಲೀಮ್ ಅಹಮದ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ರುವುದಾಗಿ ತಿಳಿದುಬಂದಿದೆ.
ಎಲ್ಲವೂ ಸರಿಯಾಗಿದೆ- ವೀಣಾ
ಕಾಂಗ್ರೆಸ್ ಬಹುದೊಡ್ಡ ರಾಜಕೀಯ ಪಕ್ಷವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವಂತೆ ನಮ್ಮ ಪಕ್ಷದಲ್ಲೂ ಕಾರ್ಯಕರ್ತರ ನಡುವೆ ಸಣ್ಣ- ಪುಟ್ಟ ಅಸಮಾಧಾನ ಗಳಿರುತ್ತದೆ. ಅವುಗಳನ್ನು ಕೆಲ ಕಾರ್ಯಕರ್ತರು ಸಲೀಂ ಅಹಮದ್ ಅವರೆದುರು ತೋಡಿ ಕೊಂಡಿದ್ದಾರೆ ಹೊರತು, ಬೇರಾವುದೇ ಗೊಂದಲ ವಾಗಿಲ್ಲ. ಅಸಮಾಧಾನಗೊಂಡ ಕಾರ್ಯಕರ್ತರನ್ನು ಸಲೀಂ ಅಹಮದ್ ಅವರು ಸಮಾಧಾನ ಪಡಿಸಿದ್ದಾರೆ. ಎಲ್ಲವೂ ಸರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.
ಸ್ಪಷ್ಟನೆ ಕೊಟ್ಟಿದ್ದೇವೆ
ಮಂಜುನಾಥ್ ಕುಮಾರ್
ನಿನ್ನೆ ನಡೆದ ಕಾಂಗ್ರೆಸ್ ಕಾರ್ಯ ಕಾರಿಣಿ ಸಭೆಯಲ್ಲಿ ನಿಯಮದಂತೆ ಸಂಬಂಧಿಸಿದ ಪದಾಧಿಕಾರಿಗಳು ಹಾಗೂ ನಾಯಕರುಗಳಿಗೆ ಮಾತ್ರ ಅವಕಾಶ ನೀಡಿ ಕಾರ್ಯಕರ್ತರುಗಳಿಗೆ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ
ನೀಡಿರಲಿಲ್ಲ. (ಮೊದಲ ಪುಟದಿಂದ) ಈ ಬಗ್ಗೆ ಮಾಹಿತಿ ಇಲ್ಲದ ಕಾರ್ಯ ಕರ್ತರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಅದಕ್ಕೆ ಸೂಕ್ತ ಸ್ಪಷ್ಟನೆಯನ್ನು ನೀಡಿದ್ದೇವೆ ಹೊರತು, ಯಾವುದೇ ಗಲಾಟೆಗಳು ನಡೆದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಹೇಳಿದ್ದಾರೆ.
ಅವಕಾಶ ಸಿಗದೆ ಅಸಮಾಧಾನ - ಮಿಥುನ್
ನಿನ್ನೆ ದಿನ ಜಿಲ್ಲೆಗೆ ಬಂದಿದ್ದ ಸಲೀಮ್ ಅಹಮದ್ ಅವರನ್ನು ಯುವ ಕಾಂಗ್ರೆಸ್ ವತಿಯಿಂದ ಭೇಟಿ ಮಾಡಿ ಅಭಿನಂದಿಸಲು ಸಂಜೆಯಿಂದಲೆ ಕಾದು ನಿಂತಿದ್ದೆವು. ಆದರೆ, ರಾತ್ರಿಯಾದರೂ ಕೂಡ ಅವರನ್ನು ಭೇಟಿ ಮಾಡಲು ಜಿಲ್ಲಾಧ್ಯಕ್ಷರು ಅವಕಾಶ ಕಲ್ಪಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಬೇಕಾಯಿತು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಸ್ಪಷ್ಟಪಡಿಸಿದರು.
ಭೇಟಿಗೆ ಅವಕಾಶ ಕೊಡಬೇಕಿತ್ತು - ಲೋಕೇಶ್
ನಿನ್ನೆ ದಿನ ಸಭೆಗೂ ಮುನ್ನ ಪಕ್ಷದ ಜಿಲ್ಲಾಧ್ಯಕ್ಷರು ಸಲೀಮ್ ಅಹಮದ್ ಅವರನ್ನು ಭೇಟಿ ಮಾಡಲು ಬಂದಿದ್ದ ಕಾರ್ಯಕರ್ತರಿಗೆ ಭೇಟಿಗೆ ಅವಕಾಶ ನೀಡಿದ್ದರೆ ಗೊಂದಲಗಳಾಗುತ್ತಿರಲಿಲ್ಲ.
ನಿನ್ನೆ ನಡೆದ ಗೊಂದಲಕ್ಕೆ ಜಿಲ್ಲಾಧ್ಯಕ್ಷರ ನಿಲುವೇ ಕಾರಣ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಕೇಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.