ಮಡಿಕೇರಿ, ಸೆ. 11 : ಜಿಲ್ಲೆಯಲ್ಲಿ 27 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1915 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1577 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 26 ಮಂದಿ ಸಾವನ್ನಪ್ಪಿದ್ದು, 392 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 109 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 60 ಮಂದಿ ಹಾಗೂ ಹೋಮ್ ಐಸೋಲೇಷನ್ನಲ್ಲಿ 143 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 331 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಶ್ರೀಮಂಗಲ ನೆಮ್ಮಲೆಯ ಕೆಕೆಆರ್ ಅಂಚೆ ಕಚೇರಿ ಬಳಿಯ 30 ವರ್ಷದ ಪುರುಷ, ಹುದಿಕೇರಿಯ ಆಟೋ ನಿಲ್ದಾಣ ಸಮೀಪದ 21 ವರ್ಷದ ಮಹಿಳೆ, ಮಡಿಕೇರಿ ಅಶ್ವಿನಿ ಆಸ್ಪತ್ರೆ ಹಿಂಭಾಗದ ಕೆ.ಎಸ್.ಆರ್.ಟಿ.ಸಿ ವಸತಿಗೃಹದ 52 ವರ್ಷದ ಪುರುಷ, ಮಡಿಕೇರಿ ಗಾಳಿಬೀಡಿನ 3ನೇ ಮೈಲ್ ಶಾಲೆ ಬಳಿಯ 57 ವರ್ಷದ ಮಹಿಳೆ, ವೀರಾಜಪೇಟೆ ಕೋತೂರುವಿನ ಅಯ್ಯಪ್ಪ ದೇವಾಲಯ ಸಮೀಪದ 28 ವರ್ಷದ ಮಹಿಳೆ, ಮಡಿಕೇರಿ ಪುಟಾಣಿ ನಗರದ 47 ಮತ್ತು 21 ವರ್ಷದ ಮಹಿಳೆಯರು, ಕುಶಾಲನಗರ ಬಿಎಂ ರಸ್ತೆಯ 45 ವರ್ಷದ ಪುರುಷ, ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ವಾರ್ತಾ ಭವನ ಸಮೀಪದ 65 ವರ್ಷದ ಪುರುಷ, ಪಾಲಿಬೆಟ್ಟ ಕಲ್ಲುಕೋರೆಯ 11 ವರ್ಷದ ಬಾಲಕ, ಪಾಲಿಬೆಟ್ಟದ ಊರುಕೊಪ್ಪಲುವಿನ 20 ವರ್ಷದ ಪುರುಷ, ವೀರಾಜಪೇಟೆ ಬಲ್ಯಮಂದೂರುವಿನ ಬಸ್ ನಿಲ್ದಾಣ ಸಮೀಪದ 65 ವರ್ಷದ ಮಹಿಳೆ ಮತ್ತು 69 ವರ್ಷದ ಪುರುಷ, ಪಾಲಿಬೆಟ್ಟ ಬಳಿಯ 25 ವರ್ಷದ ಮಹಿಳೆ, ಕುಶಾಲನಗರ ಮುಳ್ಳುಸೋಗೆಯ ಜನತಾ ಕಾಲೋನಿ 3ನೇ ಬೀದಿಯ 39 ವರ್ಷದ ಮಹಿಳೆ, ಸುಂಟಿಕೊಪ್ಪ ಕಂಬಿಬಾಣೆಯ ಚಿಕ್ಲಿ ಜಲಾಶಯ ರಸ್ತೆ ಸಮೀಪದ 39 ವರ್ಷದ ಪುರುಷ, ವೀರಾಜಪೇಟೆ ಬಿರುನಾಣಿ ಬೈಪಾಸ್ ರಸ್ತೆಯ ಹೈಸೊಡ್ಲೂರು ಗ್ರಾಮ ಮತ್ತು ಅಂಚೆಯ 82 ವರ್ಷದ ಮಹಿಳೆ, ವೀರಾಜಪೇಟೆ ಕಾನೂರುವಿನ ವಿಜಯ ಬ್ಯಾಂಕಿನ ನವೀನ್ ಹೊಟೇಲ್ ಸಮೀಪದ 55 ವರ್ಷದ ಪುರುಷ, ಗೋಣಿಕೊಪ್ಪದ ಕೈಕೇರಿ ಗ್ರಾಮದ ಬೈಪಾಸ್ ರಸ್ತೆಯ 40 ವರ್ಷದ ಮಹಿಳೆ, ಗೋಣಿಕೊಪ್ಪದ ಕಾವೇರಿ ಹಿಲ್ ನ ಸಂತ ಥಾಮಸ್ ಶಾಲೆ ರಸ್ತೆಯ 47 ವರ್ಷದ ಪುರುಷ, ವೀರಾಜಪೇಟೆ ಹುಂಡಿ ಗ್ರಾಮದ ಬಾಣಂಗಾಲ ಬಾಡಗದ 58 ವರ್ಷದ ಪುರುಷ, ಸೋಮವಾರಪೇಟೆ ತಾಕೇರಿ ಬಾಳಗದ್ದೆ ಸಮೀಪದ 48 ವರ್ಷದ ಮಹಿಳೆ, ಸೋಮವಾರಪೇಟೆ ಐಗೂರುವಿನ ಗುಳಿಗೊಪ್ಪ ದೇವಾಲಯ ಸಮೀಪದ 27 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ ಕುವೆಂಪು ಲೇಔಟಿನ 29 ವರ್ಷದ ಪುರುಷ, ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ವಾರ್ತಾ ಭವನ ಸಮೀಪದ 47 ವರ್ಷದ ಪುರುಷ, ವೀರಾಜಪೇಟೆ ಮಾಲ್ದಾರೆ ಅಂಚೆಯ ಚೆನ್ನಯ್ಯನಕೋಟೆಯ ಗುಡ್ಲೂರು ಚೆನ್ನಂಗಿಯ 70 ವರ್ಷದ ಪುರುಷ, ಮಡಿಕೇರಿ ದೇಚೂರಿನ ವಿದ್ಯಾ ಗಣಪತಿ ದೇವಾಲಯ ಸಮೀಪದ 17 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.