ಮಡಿಕೇರಿ, ಸೆ. 11: ಸೂರ್ಲಬ್ಬಿ ನಾಡಿನಲ್ಲಿ ಕೆಲವರು ಅಕ್ರಮವಾಗಿ ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದು, ನಾಡಿನಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ ಎಂದು ಅಲ್ಲಿನ ಶ್ರೀ ಸುಬ್ರಹ್ಮಣ್ಯ ದೇವಾಲಯ ಸಮಿತಿ ಆರೋಪಿಸಿದೆ.

ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಇಂದು ನಾಡಿನ ಪ್ರಮುಖರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ, ಅಬ್ಕಾರಿ ಇಲಾಖೆಯಿಂದ ಅಗತ್ಯ ಕ್ರಮಕ್ಕಾಗಿ ಗಮನ ಸೆಳೆದಿದ್ದಾರೆ.