ಸಿದ್ದಾಪುರ, ಸೆ 11: ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ಹಂತದ ವಿದ್ಯಾಗಮ ಕಾರ್ಯಕ್ರಮದ ಸಭೆಯು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಒಂಟಿಯಂಗಡಿಯಲ್ಲಿ ನಡೆಯಿತು. ಸಭೆಯಲ್ಲಿ ಶಾಲೆಯಲ್ಲಿ ದಾಖಲಾಗಿರುವ ಯಾವುದೇ ವಿದ್ಯಾರ್ಥಿಯು ಕಲಿಕೆಯಿಂದ ಹೊರಗುಳಿಯದಂತೆ ತಂಡವಾರು ರಚನೆ ಮಾಡಿ ಮಾರ್ಗದರ್ಶನ ಸಿದ್ದಾಪುರ, ಸೆ 11: ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ಹಂತದ ವಿದ್ಯಾಗಮ ಕಾರ್ಯಕ್ರಮದ ಸಭೆಯು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಒಂಟಿಯಂಗಡಿಯಲ್ಲಿ ನಡೆಯಿತು. ಸಭೆಯಲ್ಲಿ ಶಾಲೆಯಲ್ಲಿ ದಾಖಲಾಗಿರುವ ಯಾವುದೇ ವಿದ್ಯಾರ್ಥಿಯು ಕಲಿಕೆಯಿಂದ ಹೊರಗುಳಿಯದಂತೆ ತಂಡವಾರು ರಚನೆ ಮಾಡಿ ಮಾರ್ಗದರ್ಶನ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರು. ಶನಿವಾರ ಶಾಲೆಯಲ್ಲಿ ಮುಖ್ಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ವಾರದ ಕಲಿಕೆಗೆ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಮಾಹಿತಿ ನೀಡಿದರು. ಇಲಾಖೆಯ ಕೆಲವು ಮಾಹಿತಿಗಳನ್ನು ಈ ಸಂದರ್ಭ ಅಧಿಕಾರಿಗಳು ನೀಡಿದರು. ಕ್ಲಸ್ಟರ್‍ನ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದರು. ಸಭೆಯಲ್ಲಿ ವೀರಾಜಪೇಟೆ ತಾಲೂಕಿನ ಶಿಕ್ಷಣ ಸಂಯೋಜಕ ಸತೀಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಲ್ಲಪ್ಪ ಪೂಜಾರಿ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಕೆ ಸುಷಾ ಹಾಗೂ ಶಿಕ್ಷಕರು ಹಾಜರಿದ್ದರು.