ಗೋಣಿಕೊಪ್ಪಲು, ಸೆ.11: ಕೊರೊನಾ ಹತೋಟಿಗೆ ತರುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಹತೋಟಿಯ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದರೂ ಯಾವುದೇ ಪ್ರಯೋಜನ ವಾಗಲಿಲ್ಲ. ಕೊರೊನಾ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸುವ ಮೂಲಕ ರಾಜ್ಯದ ಜನತೆಯನ್ನು ಕೇವಲ ಮಾತಿನಲ್ಲೇ ಮರಳು ಮಾಡಿದೆ. ಈ ವಿಚಾರದಲ್ಲಿ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುವ ಮೂಲಕ ಪ್ರತಿಭಟಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಹೇಳಿದ್ದಾರೆ.ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಸಂದರ್ಭ ಗಡಿ ಭಾಗವಾದ ತಿತಿಮತಿ ಆನೆಚೌಕೂರು ಬಳಿಯಲ್ಲಿ ಕಾಂಗ್ರೆಸ್ ಮುಖಂಡರ ಸ್ವಾಗತ ಸ್ವೀಕರಿಸಿ ತರುವಾಯ ಪಕ್ಷದ ವತಿಯಿಂದ ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿ ಆಯೋಜಿಸಿದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಲೀಮ್ ಅಹಮದ್, ಆರೋಗ್ಯಹಸ್ತ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಭಾಗದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ನಡೆಯುತ್ತಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿ ಬರುತ್ತಿರುವ ವಿಷಯಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಚಟುವಟಿಕೆ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಪಕ್ಷ ಸಂಘಟನೆಗೆ ಒತ್ತು ನೀಡ ಲಾಗುತ್ತದೆ ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ ಎಂದರು.

ಈ ಸಂದರ್ಭ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಜಿಲ್ಲಾ ವಕ್ತಾರ ಸುರೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸದಸ್ಯ ಅರುಣ್ ಮಾಚಯ್ಯ, ಮುಖಂಡರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ,

(ಮೊದಲ ಪುಟದಿಂದ) ಅಜ್ಜಿಕುಟ್ಟಿರ ಪೆÇನ್ನಣ್ಣ, ಕದ್ದಣಿಯಂಡ ಹರೀಶ್, ಪಿ.ಕೆ.ಪೆÇನ್ನಪ್ಪ, ಸುರಯ್ಯ ಅಬ್ರಾರ್, ಜಿ.ಪಂ.ಸದಸ್ಯರಾದ ಚಂದ್ರಕಲಾ, ಶ್ರೀಜಾ, ಮುಕ್ಕಾಟೀರ ಶಿವುಮಾದಪ್ಪ, ಗೋಣಿಕೊಪ್ಪ ನಗರ ಕಾಂಗ್ರೆಸ್‍ನ ಮುಖಂಡರಾದ ಪ್ರಮೋದ್ ಗಣಪತಿ, ಅಜಿತ್ ಅಯ್ಯಪ್ಪ, ಕರ್ಣರಾಜ್, ಸಿದ್ದಿಕ್, ಮಂಜುಳ, ನಾಮೇರ ಅಂಕಿತ್, ಹರಿದಾಸ್ ಮಣಿ, ಎರ್ಮು ಹಾಜಿ, ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು, ಹಾಜರಿದ್ದರು.

ತಿತಿಮತಿಯಲ್ಲಿ ಸ್ವಾಗತ

ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಅವರನ್ನು ಕೊಡಗಿನ ಗಡಿಭಾಗವಾದ ತಿತಿಮತಿ ಬಳಿಯ ಆನೆಚೌಕೂರು ಬಳಿ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವÀ ದಲ್ಲಿ ಹೂಗುಚ್ಚ ನೀಡಿ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮುಖ್ಯ ಸಚೇತಕ ರಾದ ಎಂ.ನಾರಾಯಣ ಸ್ವಾಮಿ ಹಾಗೂ ಕೆಪಿಸಿಸಿ ವೀಕ್ಷಕರಾದ ಮಂಜುಳ ರಾಜ್, ಕೆಪಿಸಿಸಿ ಕಾರ್ಯ ದರ್ಶಿ ಶಾಹಿದ್ ಅವರನ್ನು ಬರಮಾಡಿಕೊಳ್ಳಲಾಯಿತು. ಗಡಿಭಾU Àದಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಟಾಟು ಮೊಣ್ಣಪ್ಪ, ಅಬ್ದುಲ್ ರೆಹಮಾನ್ ಬಾಪು, ಕೊಲ್ಲಿರ ಬೋಪಣ್ಣ, ತೀತಿರ ಧರ್ಮಜ, ಪಿ.ಆರ್.ಪಂಕಜ, ಜೆ.ಕೆ.ಸೋಮಣ್ಣ, ಚೇರಂಡ ಮೋಹನ್, ಎ.ಜೆ.ಬಾಬು, ಸರ ಚಂಗಪ್ಪ, ಸಂದೀಪ್, ಮೈಸೂರಿನ ಎಂ.ಎಲ್.ಸಿ. ಧರ್ಮಸೇನಾ, ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಕೋಟೆಹುಂಡಿ ಮಹದೇವು ಮುಂತಾದವರು ಉಪಸ್ಥಿತರಿದ್ದರು.

-ಹೆಚ್ .ಕೆ.ಜಗದೀಶ್