ಗುಡ್ಡೆಹೊಸೂರು, ಸೆ. 11: ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ನಿವಾಸಿಗಳಾದ ಸುಗು, ಕುಮಾರ ಎಂಬವರ ಕಾಫಿ ತೋಟದಲ್ಲಿ ಕಳೆದ ರಾತ್ರಿ ಹುಲಿ ಬಂದಿರುವುದು ಕಂಡು ಬಂದಿದೆ. ಭಾರೀ ಗಾತ್ರದ ಹುಲಿಯ ಹೆಜ್ಜೆ ಪತ್ತೆಯಾಗಿದ್ದು, ಕಾಫಿ ತೋಟದ ಕಾರ್ಮಿಕರು ಭಯಭೀತರಾಗಿದ್ದಾರೆ. ಕಳೆದ ವರ್ಷ ಈ ಭಾಗದ ದೊಡ್ಡಬೆಟ್ಟಗೇರಿಯಲ್ಲಿ ಹುಲಿ ಹಸುವನ್ನು ಕೊಂದುಹಾಕಿದ್ದು, ಅರಣ್ಯ ಇಲಾಖೆಯವರು ಹುಲಿಯ ಪತ್ತೆಗಾಗಿ ಆ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದರು. ಹಸುವಿನ ಭಕ್ಷಣೆಗಾಗಿ ಮರು ದಿನ ಬಂದ ಸಂದರ್ಭ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಹುಲಿಯ ಸಂಚಾರ ಆರಂಭವಾಗಿದೆ. -ಗಣೇಶ್.