ಮಡಿಕೇರಿ, ಸೆ. 11: ಪ್ರಸ್ತುತ ಸೆಪ್ಟೆಂಬರ್ ತಿಂಗಳು ಎರಡನೇ ವಾರ ದಾಟಿದ್ದರೂ ಜಿಲ್ಲೆಯಲ್ಲಿ ಇನ್ನೂ ಮಳೆಗಾಲದ ಚಿತ್ರಣ ಮರೆಯಾಗಿಲ್ಲ. ಕೆಲದಿನಗಳ ಹಿಂದೆ ಮಳೆ ಕಡಿಮೆಯಾಗಿ ಒಂದಷ್ಟು ಸಮಯ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಆದರೆ ಇದೀಗ ಮತ್ತೆ ಒಂದೆರಡು ದಿನದಿಂದ ವಾತಾವರಣ ದಲ್ಲಿ ಬದಲಾವಣೆ ಕಂಡುಬಂದಿದ್ದು, ಮಳೆಗಾಲದ ಚಿತ್ರಣವೇ ಮುಂದುವರೆಯುತ್ತಿದೆ.
ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತಿಲ್ಲವಾದರೂ, ಕೆಲವೆಡೆಗಳಲ್ಲಿ ದಿಢೀರನೆ ಭಾರೀ ಮಳೆ ಸುರಿಯುತ್ತಿರುವುದು, ಮತ್ತೆ ಮಳೆ ಇಳಿಮುಖಗೊಂಡು ಬಿಸಿಲಿನ ಸನ್ನಿವೇಶ ಗೋಚರಿಸುವುದು... ಇದರೊಂದಿಗೆ ಚಳಿ... ಮತ್ತೆ ಮೋಡ ಆವರಿಸುವುದು. ಈ ರೀತಿಯಾಗಿ ವಾತಾವರಣ ಅಸಹಜತೆಯಿಂದ ಕೂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಲ್ಲಂತೂ ಬೆಳಗ್ಗಿನ ಹೊತ್ತು ಹಾಗೂ ಸಂಜೆ ವೇಳೆ - ರಾತ್ರಿ ಹೆಚ್ಚು ಚಳಿಯ ಅನುಭವವಾಗುತ್ತಿದೆ. ಅಲ್ಲದೆ, ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ನಡು ನಡುವೆ ಮಳೆಯೂ ಬೀಳುತ್ತಿದೆ. ಮಡಿಕೇರಿ, ನಾಪೋಕ್ಲು, ಸೋಮವಾರಪೇಟೆ, ಕೂಡಿಗೆ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿರುವ ಕುರಿತೂ ವರದಿಯಗಿದೆ. ಆದರೆ, ಕುಶಾಲನಗರ, ಸುಂಟಿಕೊಪ್ಪ, ಅಮ್ಮತ್ತಿ, ಬಾಳೆಲೆ,
(ಮೊದಲ ಪುಟದಿಂದ) ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಮಳೆ ಹೆಚ್ಚು ಸುರಿಯುತ್ತಿಲ್ಲ... ಮಡಿಕೇರಿಯಲ್ಲಿನ ಜನತೆ ದಿನಂಪ್ರತಿ ಕೊಡೆ, ರೈನ್‍ಕೋಟ್ ಸೇರಿದಂತೆ ಬೆಚ್ಚನೆಯ ಉಡುಪಿನಲ್ಲೇ ಕಂಡುಬರುತ್ತಿದ್ದಾರೆ.
ಜಿಲ್ಲೆಯಲ್ಲಿ ಸರಾಸರಿ 79.58 ಇಂಚು
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಈತನಕ ಸರಾಸರಿ 79.58 ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 97.63 ಇಂಚಿನಷ್ಟಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ವರ್ಷ ಈತನಕ 111.75 ಇಂಚು ಹಾಗೂ ಕಳೆದ ವರ್ಷ 130.86 ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ 72.66 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 94.70 ಇಂಚು ಮಳೆ ಬಿದ್ದಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 67.32 ಇಂಚು ಮಳೆಯಾಗಿದ್ದರೆ, ಈ ಸಾಲಿನಲ್ಲಿ ಈತನಕ 54.34 ಇಂಚು ಮಳೆಯಾಗಿದೆ.
ಮುಂದಿನ ಇನ್ನೂ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಂಭವವಿರುವ ಕುರಿತು ಹವಾಮಾನ ಇಲಾಖೆಯ ಮಾಹಿತಿ ಇದೆ.
ಮರ ತೆರವು
ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ನೆನ್ನೆ ರಾತ್ರಿ ಸುರಿದ ಮಳೆಗೆ ಇಲ್ಲಿನ ಮಹಿಳಾ ಸಮಾಜ ಸಮೀಪ ಮುಖ್ಯರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪೆÇನ್ನಂಪೇಟೆ ಆರಕ್ಷಕ ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದಲ್ಲಿ ರಸ್ತೆಯಿಂದ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಲಾಯಿತು.
ಶನಿವಾರಸಂತೆ ಹೋಬಳಿ
ಶನಿವಾರಸಂತೆ ಹೋಬಳಿಯಲ್ಲಿ ಹಿಂಗಾರು ಮಳೆ ಬಿಡುವು ನೀಡುತ್ತಾ ಸುರಿಯುತ್ತಿದೆ. ನಾಟಿ ಮಾಡಿದ ಗದ್ದೆಗಳಲ್ಲಿ ನೀರು ಕಡಿಮೆಯಾಗಿದ್ದು, ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದ ಕೃಷಿಕ ಜಗದೀಶ್ ಮತ್ತೆ ಕೆಲವು ರೈತರು ಕೆರೆ, ಕೊಳವೆ ಬಾವಿ ಇತರ ಮೂಲಗಳಿಂದ ನೀರು ಹಾಯಿಸುತ್ತಿದ್ದಾರೆ.
ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ, ಕಳೆ ತೆಗೆಯುವ ಕೆಲಸ ನಡೆಯುತ್ತಿದೆ. ಗದ್ದೆಗಳಲ್ಲಿ ನಾಟಿ ಮಾಡುವ ಸಮಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯಿತು. ಆದರೆ ಈಗ ಗದ್ದೆಗಳಿಗೆ ಮಳೆ ನೀರಿನ ಅಗತ್ಯವಿದೆ. ಕಳೆ ಕೀಳುವ ಕೆಲಸ ಮಾಡಬೇಕಿದ್ದು, ಹಿಂಗಾರು ಮಳೆ ಆಗುತ್ತಿಲ್ಲ. ಮೋಟಾರ್‍ನಿಂದ ನೀರು ಹಾಯಿಸುವ ಕೆಲಸ ನಡೆದಿದೆ ಎಂದು ದೊಡ್ಡಬಿಳಹ ಗ್ರಾಮದ ರೈತರಾದ ಬಿ.ಎಸ್. ಮೋಹನ್, ಬಿ.ಎಂ. ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.