ಮಡಿಕೇರಿ, ಸೆ.11 : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 2020-21 ಸಾಲಿನ ಎಸ್‍ಎಫ್‍ಸಿ. ಮುಕ್ತನಿಧಿ ಮತ್ತು ನಗರಸಭಾ ನಿಧಿ ಶೇ 24.10 ಶೇ 7.25 ಹಾಗೂ ಶೇ. 5 ರ ಯೋಜನೆಯಡಿ ಮೀಸಲಿರಿಸಿರುವ ಕ್ರಿಯಾಯೋಜನೆ ಅನುಸಾರ ಈ ಸೌಲಭ್ಯ ನೀಡಲು ಅರ್ಹ ಫಲಾನುಭವಿಗಳಿಂದ ಅಗತ್ಯ ದಾಖಲೆಯೊಂದಿಗೆ ತಾ. 30 ರೊಳಗೆ ಪಾಸ್‍ಪೋರ್ಟ್ ಅಳತೆಯ 2 ಭಾವ ಚಿತ್ರದೊಂದಿಗೆ ಪೌರಾಯುಕ್ತರು ನಗರಸಭೆ ಮಡಿಕೇರಿ ಇವರಿಗೆ ಅರ್ಜಿ ಸಲ್ಲಿಸಲು ಕೋರಿದೆ.

ಶೇ.24.10 ಯೋಜನೆಯಡಿ ಕಲ್ಯಾಣಕ್ಕಾಗಿ ಸೌಲಭ್ಯದ ವಿವರ ಬ್ಯಾಂಕಿನಿಂದ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯುವ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ದಾಖಲಾತಿಗಳು ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ದೃಢೀಕರಣ ಪ್ರತಿ, ಆಧಾರ್ ಕಾರ್ಡು, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ, ಚಾಲ್ತಿ ವರ್ಷದ ಕಂದಾಯ ರಶೀದಿ, ಬ್ಯಾಂಕ್‍ನಿಂದ ಸಾಲ ಮಂಜೂರಾತಿ ಪತ್ರ.

ವೈದ್ಯಕೀಯ ಶಸ್ತ್ರಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅಗತ್ಯ ದಾಖಲಾತಿಗಳಾದ ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ದೃಡೀಕರಣ ಪ್ರತಿ, ಆಧಾರ್ ಕಾರ್ಡು, ಗುರುತಿನ ಚೀಟಿ, ಮತ್ತು ಪಡಿತರಚೀಟಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶೇ.07.25 ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಸೌಲಭ್ಯದ ವಿವರ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಸೌಲಭ್ಯ ಪಡೆಯಲು, ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ದೃಡೀಕರಣ ಪ್ರತಿ, ಆಧಾರ್ ಕಾರ್ಡು, ಗುರುತಿನ ಚೀಟಿ, ಮತ್ತು ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚಾಲ್ತಿ ವರ್ಷದ ಕಂದಾಯ ರಶೀದಿ, ಶಸ್ತ್ರ ಚಿಕಿತ್ಸೆ, ಆರೋಗ್ಯ, ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದ ಮೂಲ ಬಿಲ್ಲುಗಳು ಮತ್ತು ರಿಪೋರ್ಟ್ ಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಧನಸಹಾಯವು ಯಶಸ್ವಿನಿ ಯೋಜನೆ, ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಟ್ಟ ಆಸ್ಪೆತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ನಗರ ವ್ಯಾಪ್ತಿಯೊಳಗೆ ನಲ್ಲಿ ಸಂಪರ್ಕ ಮತ್ತು ಡಿಜಿಟಲ್ ವಾಟರ್ ಮೀಟರ್ ಅಳವಡಿಸುವ ಸೌಲಭ್ಯಕ್ಕಾಗಿ, ಚಾಲ್ತಿ ವರ್ಷದ ಕಂದಾಯ ರಶೀದಿ, ಆಧಾರ್ ಕಾರ್ಡ್, ಗುರುತಿನ ಚೀಟಿ, ಪಡಿತರ ಚೀಟಿ, ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ದೃಡೀಕರಣ ಪತ್ರ, ಫಾರಂ-3, ಹಕ್ಕು ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶೇ.5 ಯೋಜನೆಯಡಿ ವಿಶೇಷಚೇತನ ಫಲಾನುಭವಿಗಳಿಗೆ ಸೌಲಭ್ಯದ ವಿವರ ವೈದ್ಯಕೀಯ ಶಸ್ತ್ರಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಸೌಲಭ್ಯ ಪಡೆಯಲು, ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ದೃಡೀಕರಣ ಪ್ರತಿ, ಆಧಾರ್ ಕಾರ್ಡು, ಗುರುತಿನ ಚೀಟಿ, ಮತ್ತು ಪಡಿತರಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚಾಲ್ತಿ ವರ್ಷದ ಕಂದಾಯ ರಶೀದಿ, ಶಸ್ತ್ರ ಚಿಕಿತ್ಸೆ, ಆರೋಗ್ಯ, ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದ ಮೂಲ ಬಿಲ್ಲುಗಳು ಮತ್ತು ರಿಪೋರ್ಟ್‍ಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಧನಸಹಾಯವು (ಯಶಸ್ವಿನಿ ಯೋಜನೆ, ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಟ್ಟು ಆಸ್ಪೆತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಅವರು ತಿಳಿಸಿದ್ದಾರೆ.