ಮಡಿಕೇರಿ, ಸೆ. 9: ಜಿಲ್ಲೆಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಭಾರೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಇಂದು ಅಪರಾಹ್ನ 12.30ರ ಸುಮಾರಿಗೆ ದಿಢೀರನೆ ವಾತಾವರ ಣದಲ್ಲಿ ಬದಲಾವಣೆಯಾಗುವು ದರೊಂದಿಗೆ ಕೆಲಹೊತ್ತು ಭಾರೀ ಮಳೆ ಸುರಿಯಿತು. ಆದರೆ ಇದೇ ವೇಳೆಗೆ ಗೋಣಿಕೊಪ್ಪಲು, ಪೊನ್ನಂಪೇಟೆ, ಬಾಳೆಲೆ ಸೇರಿದಂತೆ ಕೆಲವಾರು ಕಡೆಗಳಲ್ಲಿ ಸುಡುಬಿಸಿಲಿ ನೊಂದಿಗೆ ಶೆಕೆಯ ಸನ್ನಿವೇಶವಿದ್ದ ಕುರಿತು ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರಕ್ಕೆ ವಿವಿಧ ಕೆಲಸ - ಕಾರ್ಯಕ್ಕೆ ದೂರವಾಣಿ ಕರೆ ಮಾಡಿದ್ದವರು ಅಚ್ಚರಿ ವ್ಯಕ್ತಪಡಿಸಿದರು.

ಮಡಿಕೇರಿಯಲ್ಲಿ ನಿರಂತರ ಮಳೆ ಇಲ್ಲವಾದರೂ, ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವೇ ಕಂಡುಬರುತ್ತಿದ್ದು, ನಡು ನಡುವೆ ಮಳೆಯೂ ಬೀಳುತ್ತಿದೆ. ಮಕ್ಕಂದೂರು, ಸೋಮವಾರಪೇಟೆ, ಕೂಡಿಗೆ ವಿಭಾಗದಲ್ಲೂ ಹೆಚ್ಚು ಮಳೆಯಾದ ಕುರಿತು ವರದಿಯಾಗಿದೆ. ನಾಪೋಕ್ಲು ಕಡೆಯಲ್ಲಿಯೂ ಮಳೆ - ಬಿಸಿಲು ಗೋಚರಿಸುತ್ತಿದೆ.

ಜಿಲ್ಲೆಯಾದ್ಯಂತ ಪ್ರಸ್ತುತ ಏಕರೂಪದ ವಾತಾವರಣ ಕಂಡುಬಾರದೆ ಕೆಲವೆಡೆಗಳಲ್ಲಿ ಸುಡುಬಿಸಿಲು ಇದೇ ವೇಳೆಯಲ್ಲಿ ಇತರ ಹಲವೆಡೆಗಳಲ್ಲಿ ಧೋ ಎಂದು ಮಳೆಯಾಗುವಂತಹ ಚಿತ್ರಣದ ಬಗ್ಗೆ ಜನತೆ ಅಚ್ಚರಿಪಟ್ಟಿದ್ದಾರೆ.

ಹವಾಮಾನ ಮುನ್ಸೂಚನೆಯಂತೆ ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ಸನ್ನಿವೇಶ ಮುಂದುವರೆಯುವ ಸಾಧ್ಯತೆ ಇದೆ.