ವೀರಾಜಪೇಟೆ, ಸೆ. 8: ಸಮೀಪದ ಅಂಬಟ್ಟಿ ಗ್ರಾಮದ ಪ್ರಮೋದನ್ ಟಿ. ಹಾಗೂ ಶೈಮ ಕೆ. ದಂಪತಿಗಳ ಪುತ್ರ ಅತುಲ್ ಟಿ. ಈ ಬಾರಿ ಸಿಇಟಿಯಲ್ಲಿ 445ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ ಉತ್ತಮ ಸಾಧನೆ ತೋರಿದ್ದಾನೆ.

ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅತುಲ್ ದ್ವಿತೀಯ ಪಿಯುನಲ್ಲಿ ಶೇ. 95 ಅಂಕಗಳಿಸಿದ್ದರು.