*ಕೊಡ್ಲಿಪೇಟೆ,ಸೆ..8: ಜಿಲ್ಲಾಧಿಕಾರಿಗಳ ಆದೇಶದ ಮೇರೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಮೂರು ಕೆರೆಗಳ ಜಾಗವನ್ನು ಸರ್ವೆ ಕಾರ್ಯದ ನಂತರ ತೆರವುಗೊಳಿಸಲಾಯಿತು. ಉಪ ತಹಶೀಲ್ದಾರ್ ನೇತೃತ್ವದಲ್ಲಿ ಕೊಡ್ಲಿಪೇಟೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆಯಿತು.
ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ಸರ್ವೆ ನಂ. 14 ಮತ್ತು ಸರ್ವೆ ನಂ. 61 ರಲ್ಲಿರುವ ಎರಡು ಕೆರೆಗಳು, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಸರ್ವೆ ನಂ. 108ರಲ್ಲಿರುವ ಕೆರೆ ಜಾಗವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದರು.
ಇದೀಗ ಕೆರೆ ಜಾಗದ ಸರ್ವೆ ಕಾರ್ಯ ನಡೆಸಿದ ನಂತರ ಒತ್ತುವರಿಯನ್ನು ತೆರವುಗೊಳಿಸಿ, ಸದರಿ ಸ್ಥಳವನ್ನು ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಪಿಡಿಓ ಮುಖಾಂತರ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಉಪತಹಶೀಲ್ದಾರ್ ಪುರುಷೊತ್ತಮ್, ಕಂದಾಯ ಪರಿವೀಕ್ಷಕ ಮನುಕುಮಾರ್, ತಾಲೂಕು ಸರ್ವೆಯರ್ ಯೋಗಾನಂದ, ಗ್ರಾಮ ಲೆಕ್ಕಾಧಿಕಾರಿ ಚ್ಯೆತ್ರ , ಶ್ವೇತಾಶ್ರೀ, ಗ್ರಾಮ ಸಹಾಯಕ ರಾಜು, ಭೀಮೇಶ್, ಲೋಹಿತ್ , ಪೆÇಲೀಸ್ ಸಿಬ್ಬಂದಿ ಪ್ರಶಾಂತ್ ಪಾಟೀಲ್ ಅವರುಗಳು ಉಪಸ್ಥಿತರಿದ್ದರು.