ಪೆರಾಜೆ, ಸೆ. 6: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಮಾಜಿ ಅಧ್ಯಕ್ಷ ಎನ್.ಎಸ್ ದೇವಿಪ್ರಸಾದ್ ಅವರ ಜೀವನಾಧರಿತ ನೂತನ ಸಾಕ್ಷ್ಯ ಚಿತ್ರದ ವೀಡಿಯೋ ಚಿತ್ರೀಕರಣ ಸಂಪಾಜೆಯ ಅವರ ನಿವಾಸದಲ್ಲಿ ನಡೆಯಿತು.
ಸಾಕ್ಷ್ಯಚಿತ್ರದ ಮೂಲಕ ಅರೆಭಾಷೆಗೆ ಅವರು ನೀಡಿರುವ ಕೊಡುಗೆಯನ್ನು ದಾಖಲಿಸುವ ಕಾರ್ಯ ಮಾಡುತ್ತಿದೆ. ನಂಜನಮನೆ ದೇವಿಪ್ರಸಾದ್ ಅರೆಭಾಷೆ ಮತ್ತು ಸಂಸ್ಕøತಿಗೆ ನೀಡಿರುವ ಕೊಡುಗೆ ಮತ್ತು ಅವರ ಸಾಧನೆಗಳ ಕುರಿತ ಸಾಕ್ಷ್ಯಚಿತ್ರ ಇದಾಗಿದ್ದು, ಅರೆಭಾಷೆ ಅಕಾಡೆಮಿಯು ತನ್ನ ಹೊಸ ಯೋಜನೆಯ ಮೂಲಕ ಇದನ್ನು ನಿರ್ಮಿಸುತ್ತಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ ಅಭಿಪ್ರಾಯ ಪಟ್ಟರು.
ಸುದ್ದಿ ಮೀಡಿಯಾ ಕ್ರಿಯೇಷನ್ಸ್ ತಯಾರಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಎನ್.ಎಸ್. ದೇವಿಪ್ರಸಾದ್, ಇಂದಿರಾ ದೇವಿಪ್ರಸಾದ್, ಟೀನಾ ದೇವಿಚರಣ್ ಹಾಗೂ ಸಾಕ್ಷ್ಯ ಚಿತ್ರಗಳ ಸಂಚಾಲಕ ಪುರುಷೋತ್ತಮ ಕಿರ್ಲಾಯ, ಸದಸ್ಯ ಎ.ಟಿ. ಕುಸುಮಾಧರ, ಸುದ್ದಿ ಬಳಗದ ದುರ್ಗಾಕುಮಾರ್ ನಾಯರ್ ಕೆರೆ ಮತ್ತು ತಂಡದವರು ಇದ್ದರು.