ಮಡಿಕೇರಿ, ಸೆ. 6: ವೀರಾಜಪೇಟೆ ಮಂಡಲ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವ ಮೋರ್ಚಾದ ಅಧ್ಯಕ್ಷರಾಗಿ ಕೆ.ಯು. ಗೌತಮ್, ಪ್ರಧಾನ ಕಾರ್ಯದರ್ಶಿಯಾಗಿ ಜನಕ, ಕಾರ್ಯದರ್ಶಿಯಾಗಿ ದರ್ಶನ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರೀಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಖಜಾಂಚಿ ಚೆಪ್ಪುಡಿರ ಮಾಚಯ್ಯ, ತಾಲೂಕು ಸದಸ್ಯ ಬಿಪಿನ್ ಮುತ್ತಪ್ಪ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ಬೊಳಕಾರಂಡ ಗಗನ್ ಗಣಪತಿ ಮತ್ತು ಪಟ್ರಂಗಡ ಪೆÇನ್ನಣ್ಣ ರಂಜನ್ ಮೊದಲಾದವರು ಭಾಗಿಯಾಗಿದ್ದರು.