ನಾಪೆÇೀಕ್ಲು, ಸೆ. 6: ಶತಮಾನಗಳ ಇತಿಹಾಸ ಹೊಂದಿರುವ ಸಮೀಪದ ನೆಲಜಿ ಪ್ರಾಥಮಿಕ ಶಾಲೆಯು ದುಸ್ಥಿತಿಯಲ್ಲಿದೆ.
ಪೇರೂರು ಗ್ರಾಮದ ಈ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ದುಸ್ಥಿತಿಯಲ್ಲಿದ್ದು ಸರಿಪಡಿಸಲು ಶಿಕ್ಷಣ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪೇರೂರಿನ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಶಾಲಾ ಕಟ್ಟಡಗಳು ಮಾತ್ರ ತೀರ ದುಸ್ಥಿತಿಯಲ್ಲಿವೆ. ಛಾವಣಿ ಹಂಚುಗಳು ಹಾರಿಹೋಗಿ ಗೋಡೆ ಕುಸಿಯುವ ಹಂತದಲ್ಲಿದೆ. ದುಸ್ಥಿತಿಯಲ್ಲಿರುವ ಶಾಲೆಯ ಕಟ್ಟಡದ ನವೀಕರಣಕ್ಕೆ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.