ಕೂಡಿಗೆ, ಸೆ. 6: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಹುದುಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಮೈದಾನದಲ್ಲಿ ಕ್ರೀಡಾಂಗಣದ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆ.

ಕೂಡಿಗೆ ಗ್ರಾಮ ಪಂಚಾಯತಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯ ಅಡಿಯಲ್ಲಿ ಒಂದು ಕೋಟಿ ಹಣ ಬಿಡುಗಡೆಯಾಗಿತ್ತು. ಇದರಲ್ಲಿ ಹುದುಗೂರು ಗ್ರಾಮದ ಯುವಕ ಸಂಘದ ಬೇಡಿಕೆಗೆÉ ಅನುಗುಣವಾಗಿ ಸದಸ್ಯರ ಪ್ರಯತ್ನದಿಂದಾಗಿ ಗ್ರಾಮದಲ್ಲಿ ಕ್ರೀಡಾ ಕೂಟಗಳನ್ನು ನಡೆಸಲು ಅನುಕೂಲವಾಗುವಂತೆ ಮೈದಾನದ ಸಮತಟ್ಟು, ಮಾಡುವಿಕೆ, ಗ್ಯಾಲರಿ, ನಿಮಾರ್ಣ, ಸಮಾರಂಭ ಸಭಾಂಗಣ, ಆಟಗಾರ ಅಭ್ಯಾಸಕ್ಕೆ ಅನುಕೂಲ ಆಗುವಂತೆ ಮೈದಾನದ ನಿರ್ಮಾಣ ಅದಕ್ಕೆ ವಿದ್ಯುತ್ ಅಳವಡಿಗೆಯ ಕಾಮಗಾರಿಯು ಆರಂಭಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಪ್ರಾರಂಭಗೊಂಡಿದೆ ಇದರಿಂದಾಗಿ ಈ ಭಾಗದ ಕ್ರೀಡಾಪಟುಗಳಿಗೆ ಬಹಳಷ್ಟು ಅನುಕೂಲವಾಗಲಿದೆ.