ಶ್ರೀಮಂಗಲ, ಸೆ. 5: ಪ್ರಸಕ್ತ ವರ್ಷ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಯಿಂದ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುಮಟೂರು ಗ್ರಾಮಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಸಮೀಕ್ಷೆಯಲ್ಲಿ ಕುಮಟೂರು ಗ್ರ್ರಾಮವನ್ನು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಶ್ರೀಮಂಗಲ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಕಳ್ಳಂಗಡ ರಜಿತ್ ಪೂವಣ್ಣ, ಕೋಟ್ರಂಗಡ ತಿಮ್ಮಯ್ಯ, ಎಂ.ಬಿ. ಅಪ್ಪಣ್ಣ, ಕೆ.ಎಂ. ಸೋಮಣ್ಣ, ಕೆ.ಸಿ. ನಾಣಯ್ಯ, ಕೆ.ಎಂ. ಕರುಂಬಯ್ಯ, ಕೆ.ಕೆ. ಅಪ್ಪಣ್ಣ, ಕೆ.ಸಿ. ಬೆಳ್ಳಿಯಪ್ಪ, ಬಿ.ಟಿ. ಕಾರ್ಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.