ಶನಿವಾರಸಂತೆ, ಸೆ. 5: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅನನ್ಯ ಹೆಚ್. ರಾಜ್ ಶೇ.98 ಹಾಗೂ ಪಿಯು ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ನಿಶ್ಚಿತಾ ವಿಶ್ವನಾಥ್ ಶೇ. 94 ಫಲಿತಾಂಶ ಪಡೆದಿದ್ದು, ಅವರನ್ನು ಪೋಷಕರೊಂದಿಗೆ ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ವಿ. ದಿವಾಕರ್, ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ರೊಟೇರಿಯನ್ಗಳಾದ ಟಿ.ಆರ್. ಪುರುಷೋತ್ತಮ್, ಅರವಿಂದ್, ಮೋಹನ್, ವಿನೂತ್ ಶಂಕರ್, ಇತರ ಸದಸ್ಯರು ಹಾಜರಿದ್ದರು.