ಕೂಡಿಗೆ, ಸೆ. 5: ಕುಶಾಲನಗರ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿಯ 36 ಉಪ ಗ್ರಾಮಗಳಲ್ಲಿ ಜೋಳವನ್ನು ಬೆಳೆಯಲಾಗುತ್ತದೆ. ಆದರೆ ಕಳೆದೆರಡು ವಾರಗಳಿಂದ ಮಳೆಯಿಲ್ಲದೆ ಈ ಭಾಗದಲ್ಲಿ ಬೆಳೆದ ಜೋಳ ಕಾಳುಕಟ್ಟುವ ಹಂತಕ್ಕೆ ಬಂದು ಒಣಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಬಿದ್ದಿರುವ ಮಳೆಯಿಂದಾಗಿ ಜೋಳದ ಬೆಳೆಗೆ ಉಪಕಾರವಾಗಿದ್ದು, ಕೂಡಿಗೆ, ತೊರೆನೂರು, ಸಿದ್ದಲಿಂಗಪುರ, ಅಳುವಾರ, ಸೀಗೆಹೂಸೂರು, ಹೆಬ್ಬಾಲೆ, ಚಿಕ್ಕತ್ತೂರು, ದೊಡ್ಡತ್ತೂರು ವ್ಯಾಪ್ತಿಯಲ್ಲಿ ಬಿದ್ದ ಮಳೆಯಿಂದಾಗಿ ಜೋಳದ ಬೆಳೆಗೆ ಬಹಳ ಅನುಕೂಲವಾಗಿದೆ. ಅದೇ ರೀತಿಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ಗದ್ದೆಗಳಿಗೂ ಸುರಿದ ಮಳೆಯಿಂದಾಗಿ ಕೀಟಗಳ ಕಾಟ ಕಡಿಮೆಯಾಗಿದೆ.