ಕುಶಾಲನಗರ, ಸೆ. 5: ಕುಶಾಲನಗರ ಸಂತೆ ವ್ಯಾಪಾರಿಗಳ ಸಂಘದ ಅಶ್ರಯದಲ್ಲಿ ವರ್ತಕರ ಸಭೆ ನಡೆಯಿತು. ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾರುಕಟ್ಟೆ ಆವರಣದಿಂದ ಸಂತೆಯನ್ನು ಸ್ಥಳಾಂತರಿಸುವುದರಿಂದ ಉಂಟಾಗಲಿರುವ ಅನಾನುಕೂಲತೆ ಬಗ್ಗೆ ಚರ್ಚಿಸಲಾಯಿತು. ಸ್ಥಳೀಯ ಪ್ರಮುಖರೊಂದಿಗೆ ಈ ಬಗ್ಗೆ ಚರ್ಚೆ ನಡೆದು ಅಪಾಯದ ಹಿನ್ನೆಲೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ಸಂತೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಸಭೆಗೆ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ಮಾಹಿತಿ ಒದಗಿಸಿದರು.
ಸ್ಥಳೀಯ ಪ್ರಮುಖರಾದ ವಿ.ಪಿ. ಶಶಿಧರ್, ಜೋಸೆಫ್ ವಿಕ್ಟರ್ ಸೋನ್ಸ್ ಈ ಬಗ್ಗೆ ಮಾತನಾಡಿ, ಆರ್ಎಂಸಿ ಸಂತೆ ಮಾರುಕಟ್ಟೆಯಾಗಿ ಬದಲಾವಣೆಗೊಂಡಲ್ಲಿ ಎಲ್ಲಾ ರೀತಿಯ ವರ್ತಕರಿಗೂ ಅವಕಾಶ ಕಲ್ಪಿಸಬೇಕು ಎಂದರು.
ಸಂತೆ ಮಾರುಕಟ್ಟೆ ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಪ್ರಮುಖರಾದ ಎಂ.ವಿ. ನಾರಾಯಣ, ವಿ.ಡಿ. ಪುಂಡರೀಕಾಕ್ಷ, ಪ.ಪಂ. ಸದಸ್ಯರಾದ ವಿ.ಎಸ್. ಆನಂದಕುಮಾರ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಅಬ್ದುಲ್ ಖಾದರ್, ಜಿ.ಎಲ್. ನಾಗರಾಜ್, ವಿ.ಎನ್. ಉಮಾಶಂಕರ್, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.