ಮಡಿಕೇರಿ, ಸೆ. 4: ಸೋಮವಾರಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ರಸ್ತೆಯಲ್ಲಿ ಸಂಚರಿಸಲು ಅನಾನುಕೂಲ ಉಂಟಾಗುತ್ತಿದ್ದು, ಈ ಬಗ್ಗೆ ಕಚೇರಿಗೆ ದೂರುಗಳು ಬರುತ್ತಿರುವುದರಿಂದ ಸಂಬಂಧಿಸಿದ ಮಾಲೀಕರು ಈ ಕೂಡಲೇ ತಮ್ಮ ಹದ್ದು ಬಸ್ತಿನಲ್ಲಿ ದನಕರುಗಳನ್ನು, ಆಡು ಕುರಿಗಳನ್ನು ಸಾಕತಕ್ಕದ್ದು. ತಪ್ಪಿದಲ್ಲಿ ಈ ಬೀಡಾಡಿ ದನಕರುಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗುವುದು. ಮುಂದಿನ ಕಷ್ಟನಷ್ಟಕ್ಕೆ ಪಟ್ಟಣ ಪಂಚಾಯಿತಿ ಜವಾಬ್ದಾರರಾಗುವುದಿಲ್ಲ ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ತಿಳಿಸಿದ್ದಾರೆ.