ಕೂಡಿಗೆ, ಆ. 31: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನ ಹೊಸೂರು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಬೆಟ್ಟ ವ್ಯಾಪ್ತಿಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳನ್ನು ತುಳಿದು ನಷ್ಟ ಪಡಿಸಿವೆ. ಕಳೆದ ಎರಡು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಹುದುಗೂರು, ಮದಲಾಪುರ, ಸೀತೆಗದ್ದೆ ಕಾಳಿದೇವನ ಹೊಸೂರು, ಬ್ಯಾಡಗೊಟ್ಟ, ಸೀಗೆಹೊಸೂರು, ಯಡವನಾಡು ಗ್ರಾಮಗಳಲ್ಲಿ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡುತ್ತಿವೆ, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಬರುತ್ತಾರೆ ಭರವಸೆ ನೀಡಿ ತೆರಳುತ್ತಾರೆ, ಶಾಶ್ವತವಾದ ಪರಿಹಾರ ವ್ಯವಸ್ಥೆಗೆ ಮುಂದಾಗುತ್ತಿಲ್ಲ ಎಂದು ಈ ಭಾಗದ ರೈತರ ಆರೋಪವಾಗಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಕೃಷ್ಣಪ್ಪ, ರಾಜೇಗೌಡ ಎಂಬವರ ನಾಟಿ ಗದ್ದೆಗಳನ್ನು ತುಳಿದು ಹಾಳುಮಾಡಿವೆ.

ಸಭೆÀ ನಡೆಸಲು ಒತ್ತಾಯ: ಹುದುಗೂರು ಗ್ರಾಮದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಈ ಭಾಗದ ರೈತರು ಒತ್ತಾಯ ಮಾಡಿದ್ದಾರೆ. ಈಗಾಗಲೇ ಉಪ ಅರಣ್ಯ ಸಂರಕ್ಷಣಾಧಿ ಕಾರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಕುಶಾಲನಗರ ಅರಣ್ಯ ಅಧಿಕಾರಿಗೆ ಮತ್ತು ಸೋಮವಾರಪೇಟೆ ಅರಣ್ಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ

ಸಭೆಯನ್ನು ಒಂದು ವಾರದ ಒಳಗೆ ಕರೆಯದಿದ್ದರೆ ಜಾನುವಾರುಗಳ ಸಮೇತ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಜವರೇಗೌಡ, ಶಿವಣ್ಣ, ಜಯಮ್ಮ, ಲೋಕೇಶ್, ಅನಂದ, ಸುರೇಶ್, ರಾಜೇಗೌಡ, ಸೇರಿದಂತೆ ಅನೇಕರು ಇದ್ದರು.