ಕೂಡಿಗೆ, ಆ. 31 : ಕೂಡಿಗೆ ಸಮೀಪವಿರುವ ಕಾವೇರಿ - ಹಾರಂಗಿ ಸಂಗಮದ ಸ್ಥಳದಿಂದ ಮತ್ತು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ವರೆಗೆ ಕಾವೇರಿನದಿ ದಡದ ಸಮೀಪದಲ್ಲಿರುವ ಭೂಮಿಯಲ್ಲಿ ಮಳೆ ಆಧಾರಿತವಾಗಿ ಜೋಳ ಬೆಳೆಯಲಾಗಿದೆ. ಜೋಳ ತೆನೆ ಕಟ್ಟಿ ಕಾಳುಗಳು ಆಗುತ್ತಿದ್ದು, ಜೋಳ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಇದನ್ನು ತಿಳಿದಿರುವ ಮಂಗಣ್ಣಗಳು ಧಾಳಿಯಿಡಲು ಆರಂಭಿಸಿವೆ. ಜೋಳದ ಹೊಲದಲ್ಲಿ ಇವರುಗಳದ್ದೇ ರಂಪಾಟವಾಗಿದೆ.
ಈ ಪ್ರದೇಶದ ರೈತರುಗಳಾದ ಹರೀಶ್, ದಿವಾಕರ, ವೆಂಕಟೇಶ, ಮಹೇಶ್, ಯೋಗೇಶ್, ಪರಮೇಶ್ವರ ಸೇರಿದಂತೆ ಅನೇಕ ರೈತರು ಅರಣ್ಯ ಇಲಾಖೆಯವರು ಪಟಾಕಿಯನ್ನಾದರೂ ಸಿಡಿಸಿ ಬೇರೆ ಬದಿಗೆ ಓಡಿಸಲು ಮುಂದಾಗಬೇಕೆಂದು ಒತ್ತಾಯ ಮಾಡಿದ್ದಾರೆ. -ಕೆ.ಕೆ.ಎನ್.